ಕಷ್ಟದ ಸಮಯದಲ್ಲಿ ನೆರವಾದ ನಟ ಸೋನು ಸೂದ್ ವಿರುದ್ಧ ಪ್ರಕರಣ ದಾಖಲು!

ಕೊರೋನಾದಂತಹ ಕಷ್ಟದ ಸಮಯದಲ್ಲಿ ಹಲವರಿಗೆ ಸಹಾಯ ಮಾಡಿ ಸುದ್ದಿಯಾಗಿದ್ದ ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಕಂಪ್ಲೆಂಟ್ವೊಂದು ದಾಖಲಾಗಿದೆ.
ಜುಹು ವಿನಲ್ಲಿ ಸೋನು ಸೂದ್ ಅವರಿಗೆ ಸೇರಿದ 6 ಮಹಡಿಯ ಕಟ್ಟಡವಿದ್ದು, ಈ ಕಟ್ಟಡವನ್ನು ಇತ್ತೀಚೆಗಷ್ಟೇ ಹೋಟೆಲ್ ಆಗಿ ಮಾರ್ಪಡಿಸಲಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಆರೋಪಿಸಿ ದೂರು ದಾಖಲಿಸಿದೆ. ಈ ಸಂಬಂಧ ಸೂದ್ ವಿರುದ್ಧ ಬಿಎಂಸಿ ಪೊಲೀಸರಿಗೆ ದೂರು ನೀಡಿದೆ. ಬಾಲಿವುಡ್ ನಟ, ಜುಹುವಿನ ಎಬಿ ನಾಯರ್ ರಸ್ತೆಯ ವಸತಿ ಕಟ್ಟಡವಾದ ಶಕ್ತಿ ಸಾಗರ್ ಅನ್ನು 'ಬಳಕೆದಾರರ ಅನುಮತಿಗಳನ್ನು ಕೇಳದೇ ಹೋಟೆಲ್ ಆಗಿ ಪರಿವರ್ತಿಸಿದರು' ಎಂದು ನಾಗರಿಕ ಸಂಸ್ಥೆ ಹೇಳಿಕೊಂಡಿದೆ.
Comments