800ಕಿ.ಮೀ ದೂರ ಪ್ರಯಾಣಿಸಿ ಅತ್ಯಾಚಾರದ ಪ್ರಕರಣ ದಾಖಲಿಸಿದ ಯುವತಿ !

ಅತ್ಯಾಚಾರಕ್ಕೊಳಗಾದ 22 ವರ್ಷದ ನೇಪಾಳಿ ಯುವತಿಯೊಬ್ಬಳು ಜೀವ ಭಯದಿಂದ 800 ಕಿಮೀ ದೂರ ಬಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.
22 ವರ್ಷದ ಯುವತಿ ಲಕ್ನೋನಿಂದ ಮಹಾರಾಷ್ಟ್ರದ ನಾಗ್ಪುರಕ್ಕೆ ತೆರಳಿ ಅತ್ಯಾಚಾರ ದೂರು ದಾಖಲಿಸಿದ್ದಾಳೆ.ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರನ್ನು ಭೇಟಿ ಮಾಡದಂತೆ ಆರೋಪಿ ಬೆದರಿಕೆ ಹಾಕಿದ್ದ ಹಿನ್ನಲೆಯಲ್ಲಿ ಸ್ನೇಹಿತನ ಸಹಾಯದಿಂದ ನಾಗ್ಪುರಕ್ಕೆ ಬಂದು ದೂರು ಸಲ್ಲಿಸಿದ್ದಾಳೆ.
ಲಖನೌದ ಫೈಜಾಬಾದ್ ರಸ್ತೆಯಲ್ಲಿರುವ ಫ್ಲ್ಯಾಟ್‌ವೊಂದರಲ್ಲಿ ಗೆಳತಿಯೊಂದಿಗೆ ವಾಸವಿದ್ದೆ. ಒಮ್ಮೆ ಆಕೆ ವಿಡಿಯೊ ಕರೆ ಮೂಲಕ ನನ್ನನ್ನು ಯಾದವ್‌ಗೆ ಪರಿಚಯಿಸಿದ್ದಳು. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಆತ ದುಬೈನಲ್ಲಿ ನೆಲೆಸಿದ್ದ. ನಾನು ಗೆಳತಿಗೆ 1.5 ಲಕ್ಷ ಹಣ ನೀಡಿದ್ದೆ. ಅದನ್ನು ವಾಪಸ್ ಕೇಳಿದಾಗ ಆಕೆ ನನ್ನ ಮೇಲೆ ಹಲ್ಲೆ ನಡೆಸಿದಳು. ನಿಂದಿಸಲೂ ಶುರುಮಾಡಿದಳು. ಈ ವಿಷಯವನ್ನು ಯಾದವ್‌ಗೆ ಹೇಳಿದಾಗ ಹೋಟೆಲ್‌ವೊಂದರಲ್ಲಿ ಕೊಠಡಿ ಕಾಯ್ದಿರಿಸಿದ್ದ ಆತ, ಅಲ್ಲಿಯೇ ಇರುವಂತೆ ನನಗೆ ಸೂಚಿಸಿದ್ದ. ಕೆಲ ದಿನಗಳ ನಂತರ ದುಬೈಯಿಂದ ಲಖನೌಗೆ ಬಂದಿದ್ದ ಆತ ಹೋಟೆಲ್ ಕೊಠಡಿಯಲ್ಲಿ ನನ್ನ ಮೇಲೆ ಬಲಾತ್ಕಾರ ಮಾಡಿದ್ದ' ಎಂದು ಸಂತ್ರಸ್ತ ಯುವತಿ ದೂರಿದ್ದಾರೆ.
Comments