ದಾಳಿಗೆ ಸಂಚು ರೂಪಿಸುತ್ತಿದ್ದ 9 ಶಂಕಿತ ಅಲ್-ಖೈದಾ ಉಗ್ರರ ಬಂಧನ

ದೇಶದಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕ ಜಾಲದ ಮೇಲೆ ಬೃಹತ್ ಕಾರ್ಯಾಚರಣೆಯನ್ನು ಶನಿವಾರ ಬೆಳ್ಳಂಬೆಳಗ್ಗೆ ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅಲ್ ಖೈದಾಉಗ್ರಗಾಮಿ ಸಂಘಟನೆಗೆ ಸೇರಿದ 9 ಮಂದಿ ಉಗ್ರರನ್ನು ಬಂಧಿಸಿದೆ.
ಬಂಧಿತರ ಬಳಿ ಇದ್ದ ಡಿಜಿಟಲ್ ಉಪಕರಣ, ಡಾಕ್ಯುಮೆಂಟ್ಸ್, ಜಿಹಾದಿ ಸಾಹಿತ್ಯ, ಹರಿತ ಆಯುಧಗಳು, ಕಂಟ್ರಿ ಮೇಡ್ ಶಸ್ತ್ರಾಸ್ತ್ರಗಳು, ಸ್ಥಳೀಯವಾಗಿ ನಿರ್ಮಿಸಿದ ಬಾಡಿ ಆರ್ಮರ್, ಮನೆಯಲ್ಲೇ ಸ್ಫೋಟಕ ತಯಾರಿಸುವ ಮಾರ್ಗದರ್ಶಿ ಪುಸ್ತಕಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ.9 ಅಲ್-ಖೈದಾ ಭಯೋತ್ಪಾದಕರಲ್ಲಿ 3 ಮಂದಿಯನ್ನು ಎರ್ನಾಕುಲಂ ಮತ್ತು 6 ಮಂದಿಯನ್ನು ಮುರ್ಷಿದಾಬಾದ್‌ನಿಂದ ಬಂಧಿಸಲಾಗಿದೆ.
ಪಾಕ್ ಮೂಲದ ಅಲ್ ಖೈದಾ ಉಗ್ರರು ಈ ವ್ಯಕ್ತಿಗಳನ್ನ ಸೋಷಿಯಲ್ ಮೀಡಿಯಾ ಮುಖಾಂತರ ಸೆಳೆದುಕೊಂಡು ದೆಹಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿಗಳನ್ನ ನಡೆಸಲು ಪ್ರಚೋದನೆ ನೀಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
Comments