ಮಹಾರಾಷ್ಟ್ರ ಸಿಎಂ ನಿವಾಸ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ದಾವೂದ್ ಬಂಟ..!

ಮಹಾರಾಷ್ಟ್ರಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರ ಮುಂಬೈನಲ್ಲಿರುವ ಮಾತೋಶ್ರೀ ನಿವಾಸವನ್ನು ಸ್ಪೋಟಿಸಿ ವಿಧ್ವಂಸಕ ಕೃತ್ಯ ಎಸಗುವುದಾಗಿ ಡಿ-ಗ್ಯಾಂಗ್ನ ಸದಸ್ಯನೊಬ್ಬ ಕೆಲವು ಬಾರಿ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಬೆದರಿಕೆ ಕರೆ ಮಾಡಿದ್ದಾನೆ.
ಶನಿವಾರ ತಡರಾತ್ರಿ ದೂರವಾಣಿ ಕರೆ ಮಾಡಲಾಗಿದ್ದು, ಉದ್ಧವ್ ಠಾಕ್ರೆ ಅವರ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಮುಂಬೈನ ಬಾಂದ್ರಾ ಈಸ್ಟ್‌ನಲ್ಲಿ ಇರುವ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ.
ಈ ಹಿನ್ನಲೆಯಲ್ಲಿ ಮುಂಬೈ ಕ್ರೈಂ ಬ್ರಾಂಚ್ ವಿಶೇಷ ತಂಡ ತನಿಖೆ ಆರಂಭಿಸಿದೆ. ಇದು ನಿಜವಾಗಿಯೂ ದಾವೂದ್ ಗ್ಯಾಂಗ್‍ನಿಂದ ಬಂದ ಕರೆಯೋ ಅಥವಾ ಕಿಡಿಗೇಡಿಗಳ ಕೃತ್ಯವೋ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಬೆದರಿಕೆ ಕರೆಗಳ ಜಾಡು ಪತ್ತೆಗಾಗಿ ಸ್ಥಳೀಯರ ಪೊಲೀಸರೊಂದಿಗೆ ಕ್ರೈಂ ಬ್ರಾಂಚ್ ಅಧಿಕಾರಿಗಳು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ.
Comments