ತಮಿಳುನಾಡು ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ : ಏಳು ಮಂದಿ ಮೃತ್ಯು

ತಮಿಳುನಾಡಿನ ಕಡ್ಡಲೂರು ಜಿಲ್ಲೆಯ ಕಟ್ಟುಮನ್ನರಕೋಯಿಲ್ ಎಂಬಲ್ಲಿನ ಕುರುಂಗುಡಿ ಗ್ರಾಮದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಇಂದು ಸಂಭವಿಸಿದ ಪರಿಣಾಮ ಕಾರ್ಖಾನೆ ಮಾಲೀಕ ಸೇರಿದಂತೆ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಲ್ಲದೇ ನಾಲ್ವರು ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ.
ಚೆನ್ನೈನಿಂದ 190 ಕಿಲೋ ಮೀಟರ್ ದೂರದಲ್ಲಿರುವ ಕಡಲೂರಿನ ಕುಟ್ಟುಮನ್ನಾರ್ ಕೋಯಿಲ್ ಸಮೀಪದ ಅಧಿಕೃತ ಪಟಾಕಿ ಕಾರ್ಖಾನೆ ಇದಾಗಿದೆ. ಈ ಕಾರ್ಖಾನೆಯಲ್ಲಿ ದೇಶೀ ನಿರ್ಮಿತ ಬಾಂಬ್ ತಯಾರಿಸುತ್ತಿದ್ದರೆ ಅಥವಾ ಪರವಾನಿಗೆಯಂತೆ ಕೇವಲ ಪಟಾಕಿಯನ್ನು ಮಾತ್ರ ತಯಾರಿಸುತ್ತಿದ್ದರೇ ಎಂಬುದರ ಕುರಿತು ಪರಿಶೀಲಿಸಲಾಗುವುದು ಎಂದು ಕಡ್ಡಲೂರು ಎಸ್‍ಪಿ ಅಭಿನವ್ ಹೇಳಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಕಾರ್ಖಾನೆಯಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
Comments