ಮಸೀದಿಯಲ್ಲಿ ಅಡಗಿದ್ದ ಇಬ್ಬರು ಸೇರಿ 8 ಭಯೋತ್ಪಾದಕರನ್ನು ಸದೆಬಡೆದ ಭದ್ರತಾ ಪಡೆ

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಮಿತಿಮೀರಿದ್ದು, ಭಯೋತ್ಪಾದಕರನ್ನು ಮಟ್ಟ ಹಾಕಲು ಸೇನೆ ಪಣತೊಟ್ಟಿದೆ. ಕಳೆದ ಕೆಲ ದಿನಗಳಿಂದ ಜಮ್ಮು ಕಾಶ್ಮೀರದ ವಿವಿಧೆಡೆ ಆಗ್ಗಿಂದಾಗೆ ದಾಳಿ ನಡೆಸುತ್ತಿದ್ದು, ಈವರೆಗೆ ಹಲವು ಉಗ್ರರನ್ನು ಹೆಡೆಮುರಿ ಕಟ್ಟಲಾಗಿದೆ.
ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಮೊದಲು ದಕ್ಷಿಣ ಕಾಶ್ಮೀರದ ಆವಂತಿಪೋರಾದ ಪ್ಯಾಂಪೋರ್ ನ ಮೀಜ್ ಪ್ರದೇಶದಲ್ಲಿರುವ ಮಸೀದಿಗೆ ಯಾವುದೆ ಹಾನಿಯಾಗದನತ್ತೆ ಮುಂಜಾಗ್ರತಾ ಕ್ರಮದೊಂದಿಗೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿರುವುದಾಗಿ ವರದಿ ತಿಳಿಸಿದೆ. ಪ್ರಸ್ತುತ ಮಸೀದಿ ಸುತ್ತಲೂ ಸೇನಾಪಡೆ ಸುತ್ತುವರೆದಿದ್ದು, ಸ್ಥಳದಲ್ಲಿ ಭಾರೀ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 24 ಗಂಟೆಯಲ್ಲಿ 8 ಮಂದಿ ಉಗ್ರರನ್ನು ಹತ್ಯೆಗೈಯಲಾಗಿದೆ.
Comments