ಮುಂಬೈ ಮಾದರಿಯಲ್ಲಿ ಮತ್ತೊಂದು ದಾಳಿಗೆ ದಾವೂದ್ ಜೊತೆಗೂಡಿ ಲಷ್ಕರ್ ಉಗ್ರರು ಸಂಚು!

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆ ಕೈಜೋಡಿಸಿರುವ ಲಷ್ಕರ್-ಎ-ತಯ್ಯಬಾ ಉಗ್ರಗಾಮಿ ಸಂಘಟನೆಯು 26/11ರ ಮುಂಬಯಿ ದಾಳಿಯ ಮಾದರಿಯಲ್ಲೇ ಮತ್ತೂಂದು ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ಗುಪ್ತಚರ ಮೂಲಗಳು ಬಯಲು ಮಾಡಿವೆ.
ಲಷ್ಕರ್ ಮತ್ತು ದಾವೂದ್ ಜತೆಯಾಗಿ ರೂಪಿಸುತ್ತಿರುವ ಈ ಸಂಚಿನ ಹಿಂದೆ ಪಾಕ್ ಗೂಢಚರ ಸಂಸ್ಥೆ ಐಎಸ್‌ಐ ಕೈವಾಡ ಇರುವ ಶಂಕೆಯನ್ನು ಗುಪ್ತಚರ ಮೂಲಗಳು ವ್ಯಕ್ತ ಪಡಿಸಿವೆ. ಇಸ್ಲಾಮಾಬಾದ್‌ನಲ್ಲಿರುವ ತನ್ನ ಫಾರ್ಮ್ ಹೌಸ್‌ಗೆ ಐಎಸ್‌ಐಯ ಕೆಲವು ಸದಸ್ಯರೊಂದಿಗೆ ದಾವೂದ್ ರವಿವಾರ ಬಂದು ಹೋಗಿದ್ದಾನೆ ಎನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ಗುಪ್ತಚರ ಸಂಸ್ಥೆಗಳ ಅನುಮಾನ ಮತ್ತಷ್ಟು ಬಲವಾಗಿದೆ.
Comments