ಸುಮಲತಾ ಅಂಬರೀಶ್ ಗೆ ಮತ್ತೆ ಶುರುವಾಯ್ತು ನಕಲಿ ಖಾತೆಗಳ ಕಾಟ..!!
ಲೋಕ ಸಭಾ ಚುನಾವಣೆಯಲ್ಲಿ ಮಂಡ್ಯ ಅಖಾಡದಿಂದ ಗೆದ್ದು ಸಂಸದೆಯಾದ ಸುಮಲತಾ ಅಂಬರೀಶ ಅವರಿಗೆ ಒಂದಲ್ಲ ಒಂದು ತೊಂದರೆಗಳು ಎದುರಾಗುತ್ತಿವೆ.. ಕೆಲ ದಿನಗಳ ಹಿಂದೆ ಅವರು ಚಿರಂಜೀವಿ ಜೊತೆ ಡ್ಯಾನ್ಸ್ ಮಾಡಿದ ವಿಡಿಯೋವೊಂದು ವೈರಲ್ ಆಗಿತ್ತು. ಕಷ್ಟದಲ್ಲಿರುವ ಉತ್ತರ ಪ್ರದೇಶದಲ್ಲಿರುವ ಜನರ ಸಮಸ್ಯೆಯನ್ನು ಕೇಳದೆ ನೀವು ಎಂಜಾಯ್ ಮಾಡುತ್ತಿದ್ದೀರಾ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಅದಕ್ಕೆ ಸಂಸದೆ ಸುಮಲತಾ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದರು.
ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಖಾತೆ ತೆರೆದು ಇಲ್ಲ ಸಲ್ಲದ ಸ್ಟೇಟಸ್ ಹಾಕಿ ಅವರ ಹೆಸರನ್ನು ಹಾಳು ಮಾಡುವ ಕೆಲಸವನ್ನು ಮತ್ತೆ ಕಿಡಿಗೇಡಿಗಳು ಮತ್ತೆ ಶುರುಮಾಡಿಕೊಂಡಿದ್ದಾರೆ. ಇದೇ ರೀತಿ ಹಿಂದೆ ಸುಮಲತಾ ಈ ರೀತಿ ತಮ್ಮ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅಪಪ್ರಚಾರ ಮಾಡಲು ಯತ್ನಿಸುವವರ ವಿರುದ್ಧ ಎಚ್ಚರಿಕೆ ನೀಡಿದ್ದರು. ಅಲ್ಲದೆ, ತಮ್ಮ ಅಧಿಕೃತ ಟ್ವಿಟರ್ ಖಾತೆ ಮತ್ತು ಫೇಸ್ ಬುಕ್ ಖಾತೆ ನೀಲಿ ಕಲರ್ ನಲ್ಲಿ ಟಿಕ್ ಮಾರ್ಕ್ ಮಾಡಿದ್ದು ಮಾತ್ರ ಎಂದು ಸ್ಪಷ್ಟನೆಯನ್ನೂ ಕೊಟ್ಟಿದ್ದರು. ಇದೀಗ ಡಿಕೆ ಶಿವಕುಮಾರ್ ಬಂಧನದ ಬಗ್ಗೆ ನ್ಯಾಯದ ಮುಂದೆ ಎಲ್ಲರೂ ಒಂದೇ, ಅವರವರು ಮಾಡಿದ್ದನ್ನು ಅವರವರು ಅನುಭವಿಸುತ್ತಾರೆ. ಇದಕ್ಕಾಗಿ ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವುದು ಸರಿಯಲ್ಲ ಎಂಧು ನಕಲಿ ಖಾತೆಯಿಂದ ಕಿಡಿಗೇಡಿಯೊಬ್ಬ ಸುಮಲತಾ ಹೇಳಿದಂತೆ ಸ್ಟೇಟಸ್ ಬರೆದಿದ್ದಾನೆ. ಇದು ಸಂಸದೆ ಸುಮಲತಾ ಗಮನಕ್ಕೆ ಬಂದಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ನಕಲಿ ಖಾತೆದಾರನ ಬಗ್ಗೆ ಎಚ್ಚರವಾಗಿರುವಂತೆ ಹೇಳಿದ್ದಾರಲ್ಲದೆ, ಈ ವ್ಯಕ್ತಿಗೆ ಸದ್ಯದಲ್ಲೇ ಜೈಲು ಮಾರ್ಗ ತೋರುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸುಮಲತಾ ವಿರುದ್ದ ಈಗಾಗಲೇ ಸಾಕಷ್ಟು ಷಡ್ಯಂತ್ರಗಳು ನಡೆದಿದ್ದು ತಿಳಿದೆ ಇದೆ.. ಇದೀಗ ನಕಲಿ ಖಾತೆಗಳ ಹಾವಳಿ ಹೆಚ್ಚಾಗಿದ್ದು ಸುಮಲತಾ ಅಂಬರೀಶ್ ಅವರ ವಿರುದ್ದ ಕ್ರಮ ಕೈಗೊಳ್ಳುತ್ತಿದ್ದಾರೆ.
Comments