ತನ್ನ ಹೆಂಡತಿಯ ಹತ್ಯೆ ಕೇಸ್’ನಲ್ಲಿ ಸಿಲುಕಿಕೊಂಡ ಬಾಹುಬಲಿ ನಟ ಅರೆಸ್ಟ್

ಇತ್ತಿಚಿಗೆ ಸೆಲಬ್ರೆಟಿಗಳು ಸಖತ್ ಸುದ್ದಿಯಾಗುತ್ತಲೆ ಇರುತ್ತಾರೆ.. ನೀವೆಲ್ಲಾ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ನೋಡೆ ಇರ್ತಿರಾ.. ಆ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರವನ್ನು ನಿಭಾಯಿಸಿದ್ದ ಮಧು ಪ್ರಕಾಶ್ ನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.. ಎಸ್.ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ್ದ ನಟ ಮಧು ಪ್ರಕಾಶ್ ಸದ್ಯ ಪೊಲೀಸರ ಅಥಿತಿಯಾಗಿದ್ದಾನೆ.
ಮಧು ಪ್ರಕಾಶ್ ಪತ್ನಿ ಭಾರತಿ ಅವರು ಕಳೆದ ಮಂಗಳವಾರ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಭಾರತಿ ಅವರ ಸಾವಿಗೆ ಮಧು ಪ್ರಕಾಶ್ ಕಾರಣ ಆರೋಪಿಸಿ ಮಧು ಪ್ರಕಾಶನನ್ನು ಬಂಧನಕ್ಕೆ ಒಳಪಡಿಸಲಾಗಿತ್ತು.. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಮಧು ಪತ್ನಿ ಎಂ.ಎಸ್ ಭಾರತಿ ಅವರ ತಂದೆ ನನ್ನ ಮಗಳಿಗೆ ನನ್ನ ಅಳಿಯ ಮತ್ತು ಆತನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಈ ವಿಚಾರಕ್ಕೆ ಅವಳಿಗೆ ಆಗಾಗ ಹಲ್ಲೆ ಮಾಡುತ್ತಿದ್ದರು. ಇದರಿಂದ ಮನನೊಂದ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ಮಧು ಪ್ರಕಾಶ್ ಕಾರಣ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಮಧುವನ್ನು ಅರೆಸ್ಟ್ ಮಾಡಿರವ ಪೊಲೀಸರು ಪ್ರಕರಣವನ್ನು ದಾಖಲು ಮಾಡಿದ್ದಾರೆ. ಮಧುವನ್ನು ಇಂದು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ತಿಳಿಸಿದ್ದಾರೆ. ವಿಚಾರಣೆಯ ನಂತರವಷ್ಟೆ ಸತ್ಯ ಬಹಿರಂಗವಾಗುವುದು..
Comments