ಸ್ಯಾಂಡಲ್ವುಡ್ ಸ್ಟಾರ್ ದಾಂಪತ್ಯದಲ್ಲಿ ಮತ್ತೆ ಬಿರುಕು..!?

ಸದ್ಯ ಸ್ಯಾಂಡಲ್’ವುಡ್ ನ ಸ್ಟಾರ್ ಜೋಡಿಯ ದಾಂಪತ್ಯದಲ್ಲಿ ಆಗಿಂದಾಗೆ ಬಿರುಕುಗಳು ಕಾಣಿಸಿಕೊಳ್ಳುತ್ತಿರುತ್ತವೆ.. ಕೆಲ ವರ್ಷಗಳ ಹಿಂದೆ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಬದುಕಿನಲ್ಲಿಯೂ ಕೂಡ ಬಿರುಗಾಳಿ ಹಬ್ಬಿತ್ತು.. ಚಂದನವನದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು… ಇದೀಗ ಮತ್ತೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿರಬಹುದು ಎಂಬ ಮಾತುಗಳು ಹರಿದಾಡುತ್ತಿವೆ.. ಈ ಅನುಮಾನ ಹುಟ್ಟುವುದಕ್ಕೆ ಕಾರಣ ವಿಜಯಲಕ್ಷ್ಮಿಯವರ ಟ್ವಿಟ್ಟರ್..
ಎಸ್.. ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ವಿಜಯಲಕ್ಷ್ಮೀ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಹೆಸರು ಬದಲಿಸಿಕೊಂಡಿದ್ದು ಸ್ವಲ್ಪ ಗೊಂದಲ ಸೃಷ್ಟಿ ಮಾಡಿಕೊಂಡಿದಲ್ಲದೆ, ಹಲವಾರು ಪ್ರಶ್ನೆಯನ್ನೂ ಕೂಡ ಹುಟ್ಟುಹಾಕಿದೆ. ಟ್ವಿಟರ್ ಖಾತೆಯಲ್ಲಿ ವಿಜಯಲಕ್ಷ್ಮೀ ದರ್ಶನ್ ಎಂದಿದ್ದ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.. ಈಗ ಅವರ ಟ್ವಿಟರ್‌ನಲ್ಲಿ ಬರೀ ವಿಜಯಲಕ್ಷ್ಮೀ ಎಂದಷ್ಟೇ ಹೆಸರಿದ್ದು ದರ್ಶನ್ ಅವರ ಹೆಸರನ್ನು ತೆಗೆದುಹಾಕಿದ್ದಾರೆ.. ಅವರು ದರ್ಶನ್ರವಿಂದ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಅನುಭವಿಸಿದ್ದು ಈ ಕಾರಣಕ್ಕಾಗಿ ಅವರು ತಮ್ಮ ಹೆಸರನ್ನು ಟ್ವಿಟರ್‌ನಲ್ಲಿ ದರ್ಶನ್ ಅಂತ ತೆಗೆದುಹಾಕಿ, ಬರೀ ವಿಜಯ ಲಕ್ಷ್ಮಿ ಅಂತ ಉಳಿಸಿಕೊಂಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯಲಕ್ಷ್ಮಿ ಈ ರೂಮರ್ಗಳೆಲ್ಲ ಆಧಾರವಿಲ್ಲದೆ ಹಬ್ಬಿಕೊಂಡಿದ್ದು. ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಏನು ತೊಂದರೆ ಇಲ್ಲ ಎಂದ ಮೇಲೆ ಹೆಸರನ್ನು ಬದಲಾಯಿಸಿಕೊಂಡಿರುವುದೇಕೆ ಎಂಬ ಪ್ರಶ್ನೆ ಮೂಡಿದೆ.
Comments