ಹಾಡುಹಗಲೇ ಬಸ್ ಸ್ಟಾಪ್‍ನಲ್ಲಿ ನಿಂತಿದ್ದ ಹುಡುಗನ ಕೊಲೆ..!!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತಿಚಿಗೆ ಹಾಡುಹಗಲಲ್ಲೆ ಕೊಲೆ, ದರೋಡೆಗಳು ನಡೆಯುತ್ತಿವೆ.. ಇದೀಗ ಮತ್ತೊಂದು ಕೊಲೆ ರಾಜಧಾನಿಯಲ್ಲಿ ಹಾಡುಹಗಲೇ ನಡೆದಿದೆ.. 20 ವರ್ಷದ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಮಲಾನಗರದ ಶಂಕರ್‌ನಾಗ್ ಬಸ್ ನಿಲ್ದಾಣದ ಬಳಿ ನಡೆದಿದೆ. ಹಿತೇಶ್ ಮೃತ ದುರ್ದೈವಿಯಾಗಿದ್ದಾರೆ. ಕಮಲಾನಗರದ ಶಂಕರ್‌ನಾಗ್ ಬಸ್‍ಸ್ಟಾಪ್ ಬಳಿ ನಿಂತಿದ್ದ ವೇಳೆ ದುಷ್ಕರ್ಮಿಗಳು ಹಿತೇಶ್‍ನ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಸದ್ಯ ಹಿತೇಶ್ ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದರು.. ವರ್ಷದ ಹಿಂದಷ್ಟೇ ಕಮಲಾನಗರದ ಮನೆ ಖಾಲಿ ಮಾಡಿ ಹೆಗ್ಗನಹಳ್ಳಿಯಲ್ಲಿ ವಾಸವಿದ್ದರು.. ಕೊಲೆಯಾದ ವಿಷಯ ತಿಳಿದ ಬಸವೇಶ್ವರನಗರ ಪೊಲೀಸ್ ಇನ್ಸ್ ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿದ್ದು, ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು... ಆದರೆ ತೀವ್ರ ರಕ್ತ ಸ್ರಾವವಾದ ಕಾರಣ ಹಿತೇಶ್ ಕೊನೆಯುಸಿರೆಳೆದಿದ್ದಾನೆ. ಹಿತೇಶ್ ಕೊಲೆಯಾದ ಸಮಯದಲ್ಲಿ ಇಬ್ಬರು ಹುಡುಗರ ಜೊತೆ ಮಹಿಳೆಯೊಬ್ಬರು ಇದ್ದರು ಎಂದು ಸ್ಥಳೀಯರು ಮಾತಾಡುತ್ತಿದ್ದಾರೆ. ಯಾವುದೋ ವೇಶ್ಯಾವಾಟಿಕೆ ವಿಚಾರದಲ್ಲಿ ಹಣಕಾಸಿನ ಹಂಚಿಕೆಯಲ್ಲಿ ಮಾತಿಗೆ ಮಾತು ಬೆಳೆದು ಹಿತೇಶ್‍ನನ್ನ ಕೊಲೆ ಮಾಡಲಾಗಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಹಾಡುಹಗಲಲ್ಲೆ ಈ ರೀತಿಯ ಕೊಲೆಗಳು ಬೆಂಗಳೂರಿನಲಲ್ಲಿ ಕಾಮನ್ ಆಗಿ ಬಿಟ್ಟಿವೆ.. ಇದಕ್ಕೆಲ್ಲಾ ಯಾವಾಗ ಕಡಿವಾಣ ಹಾಕುತ್ತಾರೋ ಗೊತ್ತಿಲ್ಲ…
Comments