ಮಗಳ ಅನೈತಿಕ ಸಂಬಂಧವನ್ನು ಕಣ್ಣಾರೆ ಕಂಡ ಚಿಕ್ಕಪ್ಪ..!! ಮುಂದೇನಾಯ್ತು..?
ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಸಾಕಷ್ಟು ಕೊಲೆಗಳು ನಡೆದಿವೆ… ಅದೇ ರೀತಿಯ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.. ಮಗಳು ತನ್ನ ಪ್ರಿಯಕರನೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದನ್ನು ಕಣ್ಣಾರೆ ಕಂಡ ಚಿಕ್ಕಪ್ಪನೊಬ್ಬ ಇಬ್ಬರನ್ನೂ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ..
ಕಲಬುರಗಿ ಜಿಲ್ಲೆಯ ಬೆಳಗುಂಪಾ ಗ್ರಾಮದಲ್ಲಿ ಈ ಘಟನೆ ನಡೆದಿದ. ಶಂಕರ್ ಮ್ಯಾಕೇರಿ(40) ಹಾಗೂ ಅಡೆಮ್ಮ(30) ಕೊಲೆಯಾದ ದುರ್ವೈವಿಗಳಾಗಿದ್ದಾರೆ. . ಈ ಇಬ್ಬರಿಗೂ ಕೂಡ ಈಗಾಗಲೆ ಮದುವೆಯಾಗಿದ್ದು ಇಬ್ಬರಿಗೂ ಕೂಡ ಮಕ್ಕಳಿದ್ದಾರೆ. ಅಡೆಮ್ಮಳನ್ನು ಪತಿ ಬಿಟ್ಟು ಹೋಗಿದ್ದರಿಂದ ಆಕೆ ಸಹೋದರ ಸಂಬಂಧಿಕರ ಜೊತೆ ವಾಸವಾಗಿದ್ದಳು. ಇದೇ ಗ್ರಾಮದ ನಿವಾಸಿ ಶಂಕರ್ ಮ್ಯಾಕೇರಿ ಪರಿಚಯವಾಗಿ ಇಬ್ಬರೂ ಪ್ರೀತಿಸುತ್ತಿದ್ದರು. ಇವರಿಬ್ಬರು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಗಲೇ ಚಿಕ್ಕಪ್ಪನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡು ಇಬ್ಬರನ್ನು ಸ್ಥಳದಲ್ಲಿಯೇ ಕೊಚ್ಚಿ ಕೊಲೆ ಮಾಡಲಾಗಿದೆ.. ಈ ಸಂಬಂಧ ಫರಹತ್ತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments