ಹೆಸರಿಗಷ್ಟೆ 'ಬ್ಯೂಟಿ ಪಾರ್ಲರ್'..!! ಆದರೆ ಅಲ್ಲಿ ನಡೆಯುತ್ತಿದುದ್ದೆ ಬೇರೆ…!?

ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವುದೆ ಪೋಷಕರಿಗೆ ದೊಡ್ಡ ಜವಬ್ಬಾರಿಯಾಗಿರುತ್ತದೆ… ಕೆಲವೊಮ್ಮೆ ಈ ದುಷ್ಟ ಸಮಾಜದಿಂದ ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳುವುದೇ ದೊಡ್ಡ ಕೆಲಸವಾಗಿರುತ್ತದೆ… ಆದರೂ ಕೆಲವೊಮ್ಮೆ ತಿಳಿಯದೆ ಒಂದಿಷ್ಟು ಅನಾಹುತಗಳಾಗಿ ಬಿಡುತ್ತದೆ.. ಅದರಲ್ಲೂ ಹೆಣ್ನು ಮಕ್ಕಳಿಗೆ ಬ್ಯೂಟಿ ಮೇಲೆ ಹೆಚ್ಚು ಹುಚ್ಚು.. ಹಾಗಾಗಿ ಆಗಾಗ ಹೆಣ್ಣು ಮಕ್ಕಳು ಪಾರ್ಲರ್ ಮೊರೆ ಹೋಗುತ್ತಾರೆ.. ಆದರೆ ಕೆಲವೊಂದು ಪಾರ್ಲರ್ ಗಳು ಹೆಸರಿಗಷ್ಟೆ ಬ್ಯೂಟಿ ಪಾರ್ಲರ್ ಗಳಾಗಿರುತ್ತವೆ…ಆದರೆ ಎಲ್ಲಿ ಬೇರೆಯದ್ದೆ ಚಟುವಟಿಕೆ ನಡೆಸುತ್ತಿರುತ್ತಾರೆ.. ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಿದ್ದು ಬೆಳಕಿಗೆ ಬಂದಿದೆ.
ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು ಮಹಿಳೆ ಸೇರಿದಂತೆ ಮೂವರನ್ನುಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ವಿಜಯನಗರ 4 ನೇ ಹಂತದಲ್ಲಿ ಬ್ಯೂಟಿ ಪಾರ್ಲರ್ ನಡೆಸಲಾಗುತ್ತಿತ್ತು. ಹೆಸರಿಗಷ್ಟೇ ಬ್ಯೂಟಿ ಪಾರ್ಲರ್ ಆಗಿದ್ದು, ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಪಾರ್ಲರ್ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಬ್ಯೂಟಿ ಪಾರ್ಲರ್ ಮಾಲಿಕಿ ಮತ್ತು ನೆರವು ನೀಡುತ್ತಿದ್ದ ಮಂಡ್ಯ ಜಿಲ್ಲೆಯ ಇಬ್ಬರನ್ನು ಬಂಧಿಸಲಾಗಿದೆ. ಸ್ಥಳದಲ್ಲಿದ್ದ ಮೂವರು ಯುವತಿಯರನ್ನು ರಕ್ಷಿಸಲಾಗಿದೆ. ಸಿಸಿಬಿ ಪೊಲೀಸರು ಮತ್ತು ವಿಜಯನಗರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗುತ್ತಿದೆ..
Comments