ಹಣದಾಸೆಗೆ ತಾಯಿಯೇ ತನ್ನ ಮಗಳಿಗೆ ಹೀಗ್ ಮಾಡೋದ..!?

ತಾಯಿಗೆ ತನ್ನ ಮಕ್ಕಳೆಂದರೆ ತುಂಬಾ ಪ್ರೀತಿ, ಅವರಿಗೆ ಒಂದಿಷ್ಟು ನೋವಾದರೂ ತಾಯಿಗೆ ಜೀವ ಹೋದಂಗೆ ಅನಿಸುತ್ತದೆ., ಜಗತ್ತಿನಲ್ಲಿ ಕೆಟ್ಟ ಮಕ್ಕಳಿರುತ್ತಾರೆ ಆದರೆ ಕೆಟ್ಟ ಅಮ್ಮ ಇರುವುದಿಲ್ಲ ಎನ್ನುತ್ತಾರೆ. ಆದರೆ ಇಲ್ಲಿ ಆ ವಿಷಯ ಉಲ್ಟಾ ಆಗಿದೆ ನೋಡಿ.. ಹಣದ ಆಸೆಯಿಂದ ಮಹಿಳೆಯೊಬ್ಬಳು ತನ್ನ ಅಪ್ರಾಪ್ತ ಪುತ್ರಿಗೆ ಎರಡನೆ ಸಂಬಂಧದ ಮದುವೆ ಮಾಡಲು ಮುಂದಾದ ಘಟನೆ ಬೆಳಕಿಗೆ ಬಂದಿದೆ.9ನೇ ತರಗತಿ ಓದುತ್ತಿರುವ ಬಾಲಕಿಯನ್ನು ಈಗಾಗಲೇ ಮದುವೆಯಾಗಿರುವ ವ್ಯಕ್ತಿಯೊಂದಿಗೆ ಮದುವೆ ಮಾಡಲು ತಾಯಿ ಮುಂದಾಗಿದ್ದಾರೆ.
ನ್ಯೂ ಬಾಗಲೂರು ಲೇಔಟ್ ದುರ್ಗಾದೇವಿ ದೇವಸ್ಥಾನದಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದೇ ವೇಳೆ ಬಾಲಕಿಯ ಸಹೋದರ ಹಾಗೂ ಸಂಬಂಧಿಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು, ಕೆಲ ಮಹಿಳಾ ಸಂಘಟನೆಯ ಕಾರ್ಯಕರ್ತರ ಸಹಾಯದಿಂದ ನಡೆಯಬೇಕಿದ್ದ ಮದುವೆಯನ್ನು ನಿಲ್ಲಿಸಲಾಗಿದೆ. ವ್ಯಕ್ತಿಯಿಂದ ಹಣ ಪಡೆದುಕೊಂಡಿದ್ದ ಮಹಿಳೆ ತನ್ನ ಅಪ್ರಾಪ್ತ ಪುತ್ರಿಯನ್ನು ಕೊಟ್ಟು ಮದುವೆ ಮಾಡಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. ಮಹಿಳೆಯ ಈ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಂಬಂಧಿಕರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ತಾಯಿಯೆ ಮಕ್ಕಳಿಗೆ ಶತ್ರು ಆದರೆ ಹೇಗೆ ಹೇಳಿ..?
Comments