ಭೂಗತ ಲೋಕವನ್ನೆ ಬೆಚ್ಚಿ ಬೇಳಿಸಿದ ಪಾತಕಿ ರವಿ ಪೂಜಾರಿ ಬಂಧನ..!!
ಒಂದು ಕಾಲದಲ್ಲಿ ಭೂಗತ ಲೋಕವನ್ನೆ ಬೆಚ್ಚಿಸಿದ ರವಿ ಪೂಜಾರಿ ಕೊನೆಗೆ ಬಂಧನಕ್ಕೆ ಒಳಗಾಗಿದ್ದಾರೆ…ಕರಾವಳಿ ಮೂಲದ ಭೂಗತ ಪಾತಕಿ ರವಿ ಪೂಜಾರಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ... 15 ವರ್ಷಗಳಿಗೂ ಹೆಚ್ಚು ಕಾಲ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನಗಲ್ ದೇಶದಲ್ಲಿ ಬಂಧಿಸಿರುವುದು ಬಹುತೇಕ ಖಚಿತವಾಗಿದೆ... ಸೆನೆಗಲ್ ದೇಶದ ರಾಜಧಾನಿಯಾಗಿರುವ ಡಾಕರ್ ನಲ್ಲಿ ಜನವರಿ 22ರಂದೇ ರವಿ ಪೂಜಾರಿ ಬಂಧನವಾಗಿರುವುದು ಇದೀಗ ಖಚಿತವಾಗಿದೆ. ಸದ್ಯಕ್ಕೆ ರವಿ ಪೂಜಾರಿಯನ್ನು ಡಾಕರ್ ನಲ್ಲಿರುವ ರೆಬ್ಯೂಸ್ ಡಿಟಕ್ಷನ್ ಕೇಂದ್ರದಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ..
ಏನಿಲ್ಲ ಎಂದರೂ ಕರ್ನಾಟಕದಲ್ಲಿಯೇ ಈತನ ಮೇಲೆ 18-20 ಪ್ರಕರಣಗಳು ದಾಖಲಾಗಿವೆ. ಮಂಗಳೂರಿನಲ್ಲಿ ಈತನ ವಿರುದ್ಧ 3 ಶೂಟ್ ಔಟ್ ಮತ್ತು 3 ಕೊಲೆ ಪ್ರಕರಣಗಳು ದಾಖಲಾಗಿವೆ. ಇನ್ನುಳಿದಂತೆ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಈ ಭೂಗತ ಪಾತಕಿಯ ವಿರುದ್ಧ ಸುಮಾರು 60 ಪ್ರಕರಣಗಳು ದಾಖಲಾಗಿವೆ. ಪೋನ್ ಕಾಲ್’ಗಳನ್ನು ಮಾಡಿ ಉದ್ಯಮಿಗಳನ್ನು, ರಾಜಕಾರಣಿಗಳನ್ನು ಮತ್ತು ಬಾಲಿವುಡ್ ನಟರನ್ನು ಹೆದರಿಸಿ ತನ್ನ ಸಹಚರರ ಮೂಲಕ ಹಫ್ತಾ ವಸೂಲು ಮಾಡಿಸುತ್ತಿದ್ದ ಕುಖ್ಯಾತಿ ರವಿ ಪೂಜಾರಿಗಿತ್ತು.. ಈತ ಆಯಂಟೋನಿ ಫೆರ್ನಾಂಡೀಸ್ ಎಂಬ ಹೆಸರಿನಲ್ಲಿ ಆಫ್ರಿಕಾ ದೇಶಗಳಲ್ಲಿ ತಿರುಗುತ್ತಿದ್ದ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ. ಒಟ್ಟಾರೆ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Comments