ಮೊಬೈಲ್ ಪಾಸ್'ವರ್ಡ್ ಕೊಟ್ಟಿಲ್ಲವೆಂದಿದ್ದಕ್ಕೆ ಜೀವಂತವಾಗಿ ಸುಟ್ಟ ಪಾಪಿ ಪತ್ನಿ...!!!
ಕೆಲವರು ನಿಶ್ಚಿತಾರ್ಥ ಮಾಡಿಕೊಂಡು ಒಂದು ಸಣ್ಣ ಮನಸ್ತಾಪಕ್ಕೆ ಮದುವೆ ವೇಳೆಗೆ ಸಂಬಂಧ ಮುರಿದುಕೊಂಡುವರು ನಮ್ಮೊಂದಿಗಿದ್ದಾರೆ. ಇನ್ನು ಕೆಲವರು ಪತ್ನಿಗೆ ಇಂಗ್ಲೀಷ್ ಬರಲ್ಲ ಎಂದು ಡಿವೋರ್ಸ್ ಮಾಡಿಕೊಂಡಿದ್ದಾರೆ. ಇನ್ನೂ ಕೆಲವು ಪತಿ ಮಹಾಶಯರು ತಮ್ಮ ಪತ್ನಿ ಮಾರ್ಡನ್ ಆಗಿಲ್ಲವೆಂಬ ಕಾರಣಕ್ಕಾಗಿಯೇ ವಿಚ್ಚೇದನ ನೀಡಿದ್ದಾರೆ. ಆದರೆ ಇಲ್ಲೊಂದು ಘಟನೆ ಉಲ್ಟಾ ಆಗಿದೆ. ಅದಕ್ಕೆ ಕಾರಣ ಮೊಬೈಲ್ ಪಾಸ್ ವರ್ಡ್. ತಮ್ಮ ಪತಿ ಮೊಬೈಲ್ನ ಸೀಕ್ರೆಟ್ ಕೋಡ್ ಕೊಟ್ಟಿಲ್ಲವೆಂಬ ಕಾರಣಕ್ಕಾಗಿಯೇ ಆತನನ್ನುಜೀವಂತವಾಗಿ ಸುಟ್ಟಿರುವ ಘಟನೆ ಇಂಡೋನೇಷ್ಯಾದ ಈಸ್ಟ್ ಲೊಂಬೊಕ್ ರಿಜೆನ್ಸಿಯಲ್ಲಿ
ಗಂಡ ತನ್ನ ಮೊಬೈಲ್ ಪಾಸ್ವರ್ಡ್ ನೀಡಲಿಲ್ಲವೆಂದು ಕುಪಿತಗೊಂಡ ಪತ್ನಿ ಈ ಕೃತ್ಯವೆಸಗಿದ್ದಾರೆ. ಮೃತ ವ್ಯಕ್ತಿ ದೀದಿ ಪುರ್ನಾಮ, ಮನೆಯ ಹಂಚುಗಳನ್ನು ಸರಿ ಮಾಡುತ್ತಿದ್ದ. ಈ ವೇಳೆ ಪತ್ನಿ ಇಲ್ಹಾಮ್ ಕಹ್ಯಾನಿ ಆತನ ಮೊಬೈಲ್ ಪಾಸ್ವರ್ಡ್ ನೀಡುವಂತೆ ಕೇಳಿದ್ದಾಳೆ. ಇದಕ್ಕೆ ಪರ್ನಾಮ ಒಪ್ಪಿಲ್ಲ. ಇವರಿಬ್ಬರ ನಡುವೆ ಜಗಳ ತಾರಕಕ್ಕೇರಿದೆ. ಪತ್ನಿ ಈ ಹಠದಿಂದ ಕೋಪಗೊಂಡ ಪರ್ನಾಮ ಪತ್ನಿಗೆ ಹೊಡೆದಿದ್ದಾನೆ.ಇದರಿಂದ ಸಿಟ್ಟಿಗೆದ್ದ ಪತ್ನಿ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಸದ್ಯ ಪತಿಯ ಮೇಲೆ ಕ್ರೌರ್ಯ ಮೆರೆದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
Comments