ಕಾಫಿ ಕುಡಿದು ಜವರಾಯನ ಪಾದ ಸೇರಿದ ಅಮ್ಮ-ಮಗಳು..!!
ಬೆಳ್ಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯಲಿಲ್ಲ ಅಂದರೆ ಏನೋ ಒಂಥರಾ.. ಅವತ್ತಿನ ದಿನವೆಲ್ಲಾ ಬೋರ್ ಬೋರ್ ಅನಿಸುತ್ತದೆ.. ಕಾಫಿಗೆ ತುಂಬಾ ಅಡಿಟ್ ಆಗಿರುವವರು ಕೂಡ ಇರ್ತಾರೆ. ಕಾಫಿ ಕುಡಿದರೆ ಒಂಥರಾ ಮೂಡ್ ರಿಲ್ಯಾಕ್ಸ್ ಅನಿಸುತ್ತದೆ… ಆದರೆ ಅದೇ ಕಾಫಿ ಜೀವನೇ ತೆಗೆದುಕೊಳ್ಳುತ್ತದೆ ಎಂದರೆ ಎಂತವರಿಗೂ ಕೂಡ ಶಾಕ್ ಆಗದೆ ಇರದು.. ಆಶ್ಚರ್ಯ ಪಡುತ್ತಿದ್ದೀರಾ.. ಎಸ್.. ಕಾಫಿ ಕುಡಿದು ಪ್ರಾಣ ಕಳೆದುಕೊಂಡಿರುವ ಘಟನೆಯೊಂದು ನಡಿದಿದೆ..ಕಾಫಿ ಕುಡಿದು ತಾಯಿ ಮಗಳು ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಹಳ್ಳಿ ಗ್ರಾಮದಲ್ಲಿ ನಡೆದಿದೆ.
80 ವರ್ಷದ ಅಕ್ಕಲಮ್ಮ ಹಾಗೂ 60 ವರ್ಷದ ನರಸಮ್ಮ ಮೃತಪಟ್ಟವರೆಂದು ತಿಳಿಸಲಾಗಿದೆ... ಅವರೊಂದಿಗೆ ಕಾಫಿ ಕುಡಿದ ಮೊಮ್ಮಕ್ಕಳಾದ ಅರವಿಂದ್(7) ಮತ್ತು ಆರತಿ(4) ಪ್ರಾಣಾಪಾಯದಿಂದ ಪಾರಾಗಿದ್ದು, ಕೋಲಾರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಕಾಫಿ ಕುಡಿದು ಅಸ್ವಸ್ಥರಾಗಿದ್ದ ಅಕ್ಕಲಮ್ಮ ಮತ್ತು ನರಸಮ್ಮ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಕೂಡ ಮೃತಪಟ್ಟಿದ್ದಾರೆ. ಗ್ರಾಮದ ಅಂಗಡಿಯೊಂದರಲ್ಲಿ ಕಾಫಿಪುಡಿ ತರಲಾಗಿದ್ದು, ಮನೆಯಲ್ಲಿ ಕಾಫಿ ತಯಾರಾದ ನಂತರ ಎಲ್ಲರೂ ಕುಡಿದ್ದಾರೆ. ಕಾಫಿಯಲ್ಲಿ ವಿಷ ಬೆರೆತಿರುವ ಶಂಕೆ ವ್ಯಕ್ತವಾಗಿದ್ದು, ಚೇಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ..
Comments