ರಾಜ್ಯದ ಜನತೆ ಬೆಚ್ಚಿ ಬೀಳುವ ಹೈಟೆಕ್ ಮರ್ಯಾದಾ ಹತ್ಯೆ..!!

ಪ್ರೀತಿಸಿ ಮದುವೆಯಾಗುವುದೇ ದೊಡ್ಡ ತಪ್ಪು ಎನ್ನುವ ರೀತಿಯಲ್ಲಿ ಭಾವಿಸುತ್ತಾರೆ..ಈ ವಿಷಯಕ್ಕಾಗಿ ಫ್ಯಾಮಿಲಿಯ ಮರ್ಯಾದೆಗೋಸ್ಕರ ಅದೆಷ್ಟೋ ಮರ್ಯಾದೆ ಹತ್ಯೆಗಳು ನಡೆದು ಹೋಗಿವೆ.. ಇದೀಗ ಆ ರೀತಿಯ ಮತ್ತೊಂದು ಘಟನೆ ನಡೆದು ಹೋಗಿದೆ.. ಶಾಸಕ ಗೋಪಾಲಯ್ಯ ಅವರ ಸೋದರನ ಮಗಳು ನಾಪತ್ತೆಯಾಗಿದ್ದಂತಹ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತನ್ನ ಗೆಳತಿಯೊಂದಿಗೆ ನಾಪತ್ತೆಯಾಗಿದ್ದ ಪ್ರೇಮಿ ಮನು ಎನ್ನುವವರ ಶವ ಕೊಲೆ ರೀತಿಯಲ್ಲಿ ಪತ್ತೆಯಾಗಿದ್ದು ಅನೇಕ ಅನುಮಾನಗಳಿಗೆ ಇದೀಗ ಕಾರಣವಾಗಿದೆ. ತುಮಕೂರಿನ ಕೊರಟಗೆರೆಯಲ್ಲಿ ಮನು ಎಂಬಾತನನ್ನು ಬರ್ಬರ ಹತ್ಯೆ ಮಾಡಲಾಗಿದ್ದು ಶಾಸಕರ ಕುಟುಂಬಸ್ಥರೇ ಕೊಲೆ ಮಾಡಿಸಿದ್ದಾರೆ ಎಂದು ಶಂಕಿಸಲಾಗಿದೆ.
ನಾವಿಬ್ಬರೂ ಮದುವೆಯಾದ ನಂತರ ನಮಗೆ ಸಾಕಷ್ಟು ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ನಮಗೇನಾದರೂ ಆದರೆ ಯುವತಿಯ ಮನೆಯವರೇ ಕಾರಣ ಎಂದು ಈ ಹಿಂದೆ ಮನು ಫೇಸ್ಬುಕ್ ಅಪ್ಲೋಡ್ ಮಾಡಿದ್ದ ವಿಡಿಯೋದಲ್ಲಿ ಹೇಳಿಕೊಂಡಿದ್ದರು. ನಮಗೆ ರಕ್ಷಣೆ ನೀಡುವಂತೆ ನ್ಯಾಯಾಧೀಶರಿಗೆ ಮೃತ ಮನು ಮನವಿಯನ್ನು ಕೂಡ ಮಾಡಿಕೊಂಡಿದ್ದನು.ಮನು ಹಾಗೇ ಮನವಿ ಮಾಡಿಕೊಂಡ ನಂತರ ಮನುವನ್ನು ತುಮಕೂರಿನ ಕೊರಟಗೆರೆ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ವಿಶೇಷ ತಂಡ ರಚಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನು ಕೊಲೆಯಾದ ಮನು ತುಮಕೂರಿನ ಹೆಬ್ಬೂರು ಬಳಿಯ ಬಳಗೆರೆ ಊರಿನ ಮನು ಕಾಮಾಕ್ಷಿಪಾಳ್ಯದಲ್ಲೇ ವಾಸವಾಗಿತ್ತಾನೆ.. ಮಹಾಲಕ್ಷ್ಮೀಲೇಔಟ್ ಕ್ಷೇತ್ರದ ಜೆಡಿಎಸ್ ಶಾಸಕ ಗೋಪಾಲಯ್ಯ ಅವರ ಕಿರಿಯ ಸೋದರನ ಮನೆಯಲ್ಲಿ ಮನು ಡ್ರೈವರ್ ಆಗಿ ಕೆಲಸ ಮಾಡಿಕೊಂಡಿರುತ್ತಾನೆ ಎನ್ನಲಾಗಿದೆ. ಇದು ಕೂಡ ಮರ್ಯಾದೆ ಹತ್ಯೆ ಎಂದು ಶಂಕಿಸಲಾಗಿದೆ.
Comments