ಠಾಣೆ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಪಟ್ಟ ಬಿಜೆಪಿ ಶಾಸಕ..!?

ರಾಜಕೀಯದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ… ಹೈಡ್ರಾಮಗಳು ಕೂಡ ನಡೆಯುತ್ತಲೆ ಇರುತ್ತವೆ.. ಮೊದಲು ಒಂದು ಬಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಧಾನಸೌಧದ ಮುಂದೆ ಬಟ್ಟೆ ಹರಿದುಕೊಂಡು ಹೈಡ್ರಾಮಾ ಮಾಡಿದ್ದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತೆ ಜಿಲ್ಲೆಯ ಹೊಸದುರ್ಗದಲ್ಲಿ ಮತ್ತೊಂದು ಭಾರೀ ಹೈಡ್ರಾಮ ಶುರು ಮಾಡಿದ್ದಾರೆ. ಮರಳು ದಂಧೆ ನೆಪದಲ್ಲಿ ತಮ್ಮ ಬೆಂಬಲಿಗರ ಮೇಲೆ ಪೋಲಿಸರು ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆಯನ್ನು ನಡೆಸಿದ್ದರು ಎನ್ನಲಾಗಿದೆ.
ಈ ಸಮಯದಲದಲಿ ಹೊಸದುರ್ಗ ಶಾಸಕರಾಗಿರುವ ಗೂಳಿಹಟ್ಟಿ ಶೇಖರ್ ಠಾಣೆಯ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾರೆ ಎನ್ನಲಾಗಿದೆ..ತಕ್ಷಣ ಅವರನ್ನು ಪೊಲೀಸರು ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಪೆಟ್ರೋಲ್ ಕಿವಿ, ಕಣ್ಣು ಮತ್ತು ಮೂಗಿನ ಒಳಗೆ ಹೋಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಕಣ್ಣಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕಣ್ಣಿನಲ್ಲಿ ಪೆಟ್ರೋಲ್ ಹೋಗಿದ್ದರಿಂದ ಸಣ್ಣ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಹೇಳಲಾಗುತ್ತಿದೆ. ಈ ಹೈಡ್ರಾಮ ಎಲ್ಲಿಯವರೆಗೂ ನಡೆಯುತ್ತದೋ ಎಂಬುದು ಗೊತ್ತಿಲ್ಲ.. ರಾಜಕೀಯ ವಲಯ ದೊಂಬರಾಟ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
Comments