ಪತಿಯ ಅಕ್ರಮ ಸಂಬಂಧಕ್ಕೆ ಮನನೊಂದು ಖ್ಯಾತ ಸಿಂಗರ್ ಆತ್ಮಹತ್ಯೆಗೆ ಯತ್ನ!!!

ಫೇಸ್ ಬುಕ್ ಲೈವ್ ಸೂಸೈಡ್ ಗಳು ಇತ್ತೀಚಿಗಂತೂ ಸಿಕ್ಕಾಪಟ್ಟೆ ಹೆಚ್ಚಾಗುತ್ತಿವೆ. ಸದ್ಯ ಇಲ್ಲೊಂದು ಘಟನೆ ಬೆಚ್ಚಿ ಬೀಳಿಸಿದೆ. ಫೇಮಸ್ ಸಿಂಗರ್ ಒಬ್ಬರು ಫೇಸ್ ಬುಕ್ ಲೈವ್ ನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹರ್ಯಾಣದ ಗಾಯಕಿ ಮತ್ತು ಡ್ಯಾನ್ಸರ್ ಒಬ್ಬರು ಫೇಸ್‍ಬುಕ್ ಲೈವ್‍ನಲ್ಲಿ ಇಲಿ ಪಾಶಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೃಷ್ವಶಾತ್ ,ವಿಷ ಸೇವಿಸಿದ ಆ ಗಾಯಕಿ ಕಮ್ ಡ್ಯಾನ್ಸರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪತಿ-ಪತ್ನಿಯರ ಜಗಳದಲ್ಲಿ ಸಿಂಗರ್ ಅನಾಮಿಕ ಈ ರೀತಿ ಮನನೊಂದು ಸೂಸೈಡ್ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಪತಿ ಬೇರೊಬ್ಬ ಹೆಂಗಸಿನ ಜೊತೆ ಅಕ್ರಮ ಸಂಬಂಧ ಹೊಂದಿದ್ದರು, ಈ ಹಿನ್ನಲೆಯಲ್ಲಿ ಗಾಯಕಿ ಅನಾಮಿಕ ಎಷ್ಟು ಬಾರಿ ಅವರನ್ನು ಮನವೊಲಿಸಲು ಯತ್ನಿಸಿದ್ದರು. ಅಷ್ಟೇ ಅಲ್ಲಾ, ಇದರಿಂದ ಹೊರ ಬರುವಂತೆ ಕೇಳಿಕೊಂಡಿದ್ದರು. ಆದರೆ ಪತಿ ಯಾವ ಮಾತನ್ನು ಒಪ್ಪಿಕೊಳ್ಳದೇ ಇದ್ದುದ್ದರಿಂದ ಈ ರೀತಿ ಮಾಡಿಕೊಂಡಿದ್ದಾರೆ.
ಅನಾಮಿಕ ಬಾವಾ(30) ಆತ್ಮಹತ್ಯೆಗೆ ಯತ್ನಿಸಿದ ಗಾಯಕಿ. ಅನಾಮಿಕ ಅವರು ಆನ್ನೆ ಬಿ ಎಂದು ಖ್ಯಾತರಾಗಿದ್ದು, ಫೇಸ್‍ಬುಕ್ ಲೈವ್‍ಗೆ ಬಂದು ಇಲಿ ಪಾಶಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅನಾಮಿಕ ಈಗ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂದಹಾಗೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಗ ಪೊಲೀಸರು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಗಾಯಕಿ ಅನಾಮಿಕ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಆಕೆಯ ಪತಿ. ತನ್ನ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಅನಾಮಿಕ ಈ ನಿರ್ಧಾರ ಮಾಡಿದ್ದಾರೆ.ಈ ಬಗ್ಗೆ ಯಾವುದೇ ಪ್ರಕರಣ ದಾಖಲಗಿರಲಿಲ್ಲ. ಬಳಿ ಆಸ್ಪತ್ರೆಯ ಸಿಬ್ಬಂಧಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಪೊಲೀಸರ ತಂಡವೊಂದು ಗಾಯಕಿ ಅನಾಮಿಕ ಮನೆಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದು ಬಂದು.
Comments