ಹೊಸ ವರ್ಷಾಚರಣೆ ಸಮಯದಲ್ಲಿ ಸಿಲಿಂಡರ್ ಸ್ಫೋಟ..!

ಹೊಸ ವರ್ಷವನ್ನು ಎಲ್ಲರು ತುಂಬಾ ಖುಷಿಯಿಂದ ಆಚರಣೆ ಮಾಡಿಕೊಳ್ಳುತ್ತಿದ್ದರೆ ಕೆಲವೊಂದು ಕಡೆ ಸಾಕಷ್ಟು ಅವಘಡಗಳು ನಡೆದುಹೋಗಿವೆ.. ಸಂಭ್ರಮ ಸಡಗರದಿಂದ ಇರಬೇಕಾದ ದಿನವಿದು.. ಅದರಲ್ಲಿ ಹೊಸ ವರ್ಷಾಚರಣೆ ವೇಳೆ ಲೂರ್ದ್ ಮಾತಾ ಚರ್ಚ್ನಲ್ಲಿ ಸಿಲಿಂಡರ್ ಸ್ಫೋಟಗೊಂಡು 7 ಮಂದಿ ಗಾಯಗೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಬಿದಿರುಮೆಳೆ ತೋಟದ ಮರಿಯಾದಾಸ್, ಥಾಮಸ್, ಸುದೀಪ್ (13), ಕಿರಣಬಾಬು, ಅಂಟನಿ ಫ್ರಾನ್ಸಿಸ್, ರವಿ, ಶಾಂತಿನಗರ ಡಿಪೋ ನಿವಾಸಿ ಶಾಯಿದ್(12)ಗೆ ಗಾಯಾಳುಗಳಿ. ಇನ್ನು ಕಿರಣಬಾಬು ಮತ್ತು ಮರಿಯಾದಾಸ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸ ವರ್ಷದಂದು ಖುಷಿಯಾಗಿರಬೇಕಿದ್ದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ..
Comments