ಚುನಾವಣೆಗೆ ಸ್ಪರ್ಧಿಸಲು ಹಣ ಕೊಡದಿದ್ದಕ್ಕೆ ಪತ್ನಿಯನ್ನೇ ಬೆಂಕಿಯಚ್ಚಿ ಕೊಂದ ಪತಿರಾಯ..!!

ಎಲೆಕ್ಷನ್ ನಲ್ಲಿ ಒಂದಲ್ಲಾ ಒಂದು ರೀತಿಯ ಜಗಳಗಳು ಕಿತ್ತಾಟಗಳು, ವೈಮನಸ್ಸುಗಳು ನಡೆಯುತ್ತಲೆ ಇರುತ್ತವೆ..ಆದರೆ ಕೆಲವೊಮ್ಮೆ ಈ ಜಗಳಗಳು ವಿಕೋಪಕ್ಕೆ ತಿರುಗಿ ಕೊಲೆಗೆ ಹೋಗಿದ್ದು ಉಂಟು.. ಆದರೆ ಇಲ್ಲೊಬ್ಬ ಭೂಪ ಜಿಲ್ಲಾ ಪಂಚಾಯಿತಿ ಚುನಾವಣೆಗಾಗಿ ಸ್ಪರ್ಧಿಸಲು ಹಣಕ್ಕಾಗಿ ಪತಿಯೇ ಪತ್ನಿಯನ್ನು ಬೆಂಕಿ ಹಚ್ಚಿ ಕೊಂದಿರುವ ಘಟನೆ ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾವ್ಯಾರಾಣಿ ಎಂಬುವವರು ಮೃತ ದುರ್ದೈವಿಯಾಗಿದ್ದಾರೆ..
ಅತ್ತೆ, ಪತಿ,ನಾದಿನಿಯ ಪತಿ ಸೇರಿಕೊಂಡು ಬೆಂಕಿ ಹಚ್ಚಿದ್ದಾರೆ ಎಂದು ಕಾವ್ಯಾರಾಣಿ ಸಾಯುವ ಮುನ್ನ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.. ಕಾವ್ಯಾರಾಣಿ ಹಾಗೂ ಸಂತೋಷ್ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು, ಸಂತೋಷ್ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ, ಮುಂಬರುವ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದ ಸಂತೋಷ್, ಹಣಕ್ಕಾಗಿ ಕಾವ್ಯಾ ಅವರನ್ನು ಪೀಡಿಸುತ್ತಿದ್ದ. ತವರುಮನೆಯಿಂದ 15 ಲಕ್ಷ ರೂ. ತರುವಂತೆ ಒತ್ತಡ ಹೇರಿದ್ದ. ಹಣ ತರದೆ ಇದ್ದಾಗ ಪತ್ನಿಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಈ ಘಟನೆ ಸಂಬಂಧ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments