ಮಗಳನ್ನು ಚುಡಾಯಿಸದ್ದನ್ನ ಪ್ರಶ್ನಿಸಿದ್ದೇ ತಂದೆಯ ತಪ್ಪಾಯ್ತ..! ಮುಂದೇನಾಯ್ತು..?
ಇತ್ತಿಚಿಗೆ ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವುದೆ ದೊಡ್ಡ ತಲೆ ನೋವಾಗಿ ಬಿಟ್ಟಿದೆ. ಹೊರಗಡೆ ಕಳುಹಿಸಿದರೆ ಚುಡಾಯಿಸುವವರೆ ಹೆಚ್ಚು.. ಮಗಳನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ ತಂದೆಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕೆಜಿಎಫ್ ನಗರದ ಮಾರಿಕುಪ್ಪಂ ಬಡಾವಣೆಯಲ್ಲಿ ನಡೆದಿದೆ. ಹೆಣ್ಣು ಮಕ್ಕಳನ್ನು ಹೇಗೆ ನೋಡಿಕೊಂಡರು ಕಷ್ಟ ಎನ್ನುವಂತಾಗಿದೆ. ಹಾಗಾಗಿ ಪೋಷಕರಿಗೆ ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವುದು ದೊಡ್ಡ ತಲೆನೋವಾಗಿ ಬಿಟ್ಟಿದೆ.. ಹೆಣ್ಣು ಮಕ್ಕಳ ರಕ್ಷಣೆಗಾಗಿ ಸಾಕಷ್ಟು ಜನರು ಧನಿ ಎತ್ತಿದ್ದರೂ ಕೂಡ ಇಂತಹ ನೀಚ ಕೃತ್ಯಗಳನ್ನು ದುಷ್ಕರ್ಮಿಗಳು ಮಾಡುತ್ತಲೆ ಇದ್ದಾರೆ.
ಮಗಳನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕುಮಾರ್ (48) ಮೃತ ದುರ್ದೈವಿ. ಕೊಲೆಗೈದ ಆರೋಪಿಗಳನ್ನು ಸುರೇಶ್ ಹಾಗೂ ಆಲ್ವಿನ್ ಎಂದು ಗುರುತಿಸಲಾಗಿದ್ದು, ಇವರು ಮಾರಿಕುಪ್ಪಂ ನಿವಾಸಿಗಳಾಗಿದ್ದಾರೆ. ಕುಮಾರ್ ಎಂಬುವರ ಮಗಳನ್ನು ಸುರೇಶ್ ಹಾಗೂ ಆಲ್ವಿನ್ ಚುಡಾಯಿಸಿದ್ದರು, ಇದು ತಂದೆಯ ಗಮನಕ್ಕೆ ಬಂದಿದ್ದು, ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಕಿಡಿಗೇಡಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕುಮಾರ್ ಅವರನ್ನೇ ಕೊಲೆ ಮಾಡಿದ್ದಾರೆ. ಈ ರೀತಿಯ ಕೃತ್ಯಗಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಸ್ಥಳಕ್ಕೆ ಕೆಜಿಎಫ್ ಎಸ್ಪಿ ಲೋಕೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments