ಅಕ್ರಮ ಸಂಬಂಧಕ್ಕೆಅಡ್ಡಿಯಾದ ತನ್ನ ಹೆತ್ತ ಮಕ್ಕಳನ್ನೇ ಕೊಂದ ಬಿಟ್ಟ  ತಾಯಿ..!?

12 Dec 2018 5:06 PM | Crime
718 Report

ಮನೆಯಲ್ಲಿ ನಡೆಯುವ ಜಗಳದಿಂದಾಗಿ ಬೇಸತ್ತ ಮಹಿಳೆಯೊಬ್ಬಳು ತನ್ನ ಹೆತ್ತ ಮಕ್ಕಳನ್ನೇ ವೇಲ್​ನಿಂದ ಬಿಗಿದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿಯ ಆಯೋಧ್ಯನಗರದಲ್ಲಿ ನಡೆದಿದೆ. ಪ್ರೇಮಾ ಪರುಶುರಾಮ ಹುಲಕೋಟಿ ಎಂಬುವವರು ಈ ಕೃತ್ಯವನ್ನು ಎಸಗಿದ್ದಾರೆ.. ರೋಹಿತ್ (6) ಹಾಗೂ ರೋಹಿಣಿ (4) ಮೃತ ದುರ್ದೈವಿ ಮಕ್ಕಳಾಗಿದ್ದಾರೆ.. ಕೌಟುಂಬಿಕ ಕಲಹಕ್ಕೆ ಬೇಸತ್ತು ಈಕೆ ಇಬ್ಬರು ಮಕ್ಕಳನ್ನು ವೇಲ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ.

ಆದರೆ ಈ ಕೆಲಸ ಮಾಡುವುದಕ್ಕೆ ಪ್ರಮುಖ ಕಾರಣ ಅನೈತಿಕ ಸಂಬಂಧ ಎಂದು ಕೂಡ ಹೇಳಲಾಗುತ್ತಿದೆ. ಆರೋಪಿ ತಾಯಿ ಪ್ರೇಮಾ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಗಂಡ ಕೆಲಸಕ್ಕೆ ಹೋದಾಗ ಪರ ಪುರುಷ ಮನೆಗೆ ಬಂದು ಹೋಗುತ್ತಿದ್ದನು. ಆಗ ಅವರಿಬ್ಬರ ಅನೈತಿಕ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗುತ್ತಿದ್ದರು. ಆದ್ದರಿಂದ ಪ್ರಿಯಕರನ ಜೊತೆ ಸೇರಿ ಮಕ್ಕಳನ್ನೇ ಕೊಲೆ ಮಾಡಿದ್ದಾಳೆ ಅಂತ ಹೇಳಲಾಗುತ್ತಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ನಿರ್ದಯಿ ಪ್ರೇಮಾಳನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಏನೆ ಆದರೂ ತಮ್ಮ ಸ್ವಾರ್ಥಕ್ಕಾಗಿ ಏನು ಅರಿಯದ ಮಕ್ಕಳನ್ನು ಸಾಯಿಸುವುದು ಅಪರಾಧವೇ ಸರಿ…

Edited By

Manjula M

Reported By

Manjula M

Comments