ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಅತ್ತೆಗೆ ಅಳಿಯ ಏನ್ ಮಾಡ್ದ ಗೊತ್ತಾ..?

ಅಳಿಯ ಮಾಡುತ್ತಿದ್ದ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಅತ್ತೆಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಂಡೆಪಾಳ್ಯದ ನಿವಾಸಿಯಾದ ಪ್ರೇಮಾ(45) ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದು, ಕಾರ್ತಿಕ್ ಅತ್ತೆಯನ್ನೇ ಕೊಲೆ ಮಾಡಿದ ಅಳಿಯ. ಪ್ರೇಮಾ ಎಂಬುವರು ತಮ್ಮ ಮಗಳನ್ನು ಕಾರ್ತಿಕ್ ಎಂಬಾತನೊಂದಿಗೆ ಮದುವೆ ಮಾಡಿದ್ದರು. ಇತ್ತೀಚೆಗೆ ಕಾರ್ತಿಕ್ ಬೇರೊಬ್ಬ ಮಹಿಳೆಯ ಜೊತೆ ಸಂಬಂಧವಿಟ್ಟುಕೊಂಡಿರುವ ವಿಚಾರ ಅತ್ತೆಗೆ ತಿಳಿದ ಕಾರಣ ಕಾರ್ತಿಕ ಬಳಿ ಈ ವಿಚಾರಕ್ಕೆ ಜಗಳವಾಡಿಕೊಂಡಿದ್ದಾರೆ.
ಇದರಿಂದ ಕೋಪಗೊಂಡ ಆತ ರಾತ್ರಿ ಮನೆಯವರೆಲ್ಲರೂ ಊಟ ಮಾಡಿ ಮಲಗಿದ್ದಾಗ ಮಧ್ಯರಾತ್ರಿ ಎದ್ದು ಅತ್ತೆಯನ್ನು ಕತ್ತು ಹಿಸುಕಿ ಸಾಯಿಸಿ ನಂತರ ಯಾರಿಗೂ ಅನುಮಾನ ಬಾರದಂತೆ ಮೃತದೇಹವನ್ನು ಅಡುಗೆ ಮನೆಗೆ ಎಳೆದೊಯ್ದು ಗ್ಯಾಸ್ ಸಿಲಿಂಡರ್ ಸೋರಿಕೆ ಮಾಡಿ ಬೆಂಕಿ ಹಚ್ಚಿ ಎಲ್ಲರನ್ನೂ ಕರೆದಿದ್ದಾನೆ. ಮನೆಯವರು ಬೆಂಕಿಯನ್ನು ನಂದಿಸಿದ್ದು, ಪ್ರೇಮಾ ಅವರನ್ನು ಎಬ್ಬಿಸಲು ಯತ್ನಿಸಿದ್ದಾರೆ. ಆದರೆ ಅವರು ಸತ್ತಿರುವ ವಿಚಾರ ತಿಳಿದು ಅಳಿಯನ ಮೇಲೆ ಅನುಮಾನ ಬಂದು ಆತನನ್ನು ಥಳಿಸಿ ಬಾಯ್ಬಿಡಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಪೊಲೀಸ್ ಬರುವುದರೊಳಗೆ ಕಾರ್ತಿಕ್ ಅಲ್ಲಿಂದ ಪರಾರಿಯಾಗಿದ್ದು , ನಂತರ ಕಾರ್ತಿಕ್ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಹುಡುಕಿ ಇದೀಗ ಕಾರ್ತಿಕ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Comments