ಮಂಡ್ಯ ಬಸ್ ದುರಂತಕ್ಕೆ ಕಾರಣವಾದ ಬಸ್ ಚಾಲಕನ ಬಂಧನ

ಮಂಡ್ಯ ಜಿಲ್ಲೆಯ ಪಾಂಡವಪುರದ ಕನಗನಮರಡಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಘಡಕ್ಕೆ ಈಡಾಗಿದ್ದ ಬಸ್ ಚಾಲಕ ಶಿವಣ್ಣನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯ ಸಂಬಂಧ ಪೊಲೀಸರ ಮುಂದೆ ಶಿವಣ್ಣ ಮಂಡ್ಯ ಬಸ್ ದುರಂತಕ್ಕೆ ಕಾರಣವಾದ ಸ್ಪೋಟಕ ಕಾರಣ ಬಿಚ್ಚಿಟ್ಟಿದ್ದಾನೆ ಎನ್ನಲಾಗಿದೆ.
ಕನಗನಮರಡಿ ನಾಲೆಯ ಬಳಿ ಬರುತ್ತಿದ್ದಾಗ ಬಸ್ ನನ್ನ ನಿಯಂತ್ರಣ ತಪ್ಪಿ ನಾಲೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುತಿತ್ತು, ಹೀಗಾಗಿ ನಾನು ಬಸ್ ನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡುವ ಸಲುವಾಗಿ ಬಸ್ ಅನ್ನು ಕೊಂಚ ತಿರುಗಿಸಿದೆ ಪರಿಣಾಮ ಬಸ್ ನಾಲೆಯೊಳಗೆ ಬಿತ್ತು ಅಂತ ಚಾಲಕ ಹೇಳಿದ್ದಾನೆ ಎನ್ನಲಾಗಿದೆ. ಚಾಲಕನನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಳಪಡಿಸಿದ್ದಾರೆ.
Comments