ಬೆಂಕಿಗಾಹುತಿಯಾದ ಈ ಮುದ್ದು ಕಂದಮ್ಮಗಳು..!

ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿಯಿಂದ ಉಂಟಾದ ಹೊಗೆಯಲ್ಲಿ ಉಸಿರುಕಟ್ಟಿ ಎರಡು ಪುಟ್ಟ ಕಂದಮ್ಮಗಳು ಸಾವಿಗೀಡಾದ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಹೊಟ್ಟೆಪಾಡಿಗಾಗೀ ನೇಪಾಳದಿಂದ ಬಂದಿದ್ದ ದೇವೆಂದ್ರ ಮತ್ತು ರೂಪಸಿ ದಂಪತಿಗಳ ಸೃಜನ್(5) ಮತ್ತು ಲಕ್ಷ್ಮಿ(2) ಮೃತ ದುದೈರ್ವಿ ಮಕ್ಕಳಾಗಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್ಮೆಂಟ್’ನಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಾ ಶೆಡ್ ಒಂದರಲ್ಲಿ ವಾಸವಿದ್ದ ನೇಪಾಳ ದಂಪತಿಗಳು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಧಿಸುತ್ತಿದ್ದರು., ಸಾಮಾನ್ಯವಾಗಿ ಪ್ರತಿ ದಿನದಂತೆ ಇಂದು ಬೆಳಿಗ್ಗೆ ದೇವೇಂದ್ರ ದಂಪತಿ ಶೆಡ್ ಒಳಗೆ ಮಕ್ಕಳನ್ನು ಬಿಟ್ಟು ಹೊರಗಿನಿಂದ ಚಿಲಕ ಹಾಕಿ ಕೆಲಸಕ್ಕೆ ಹೋಗಿದ್ದು ಸಂದರ್ಭದಲ್ಲಿ ಮಕ್ಕಳು ಬೆಂಕಿ ಪೊಟ್ಟಣದಲ್ಲಿ ಆಟವಾಡುವ ಸಮಯದಲ್ಲಿ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿದ್ದು ಇದರಿಂದ ಉಂಟಾದ ಹೊಗೆಯಿಂದ ಮಕ್ಕಳು ಉಸಿರುಗಟ್ಟಿ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ. ತಂದೆ ತಾಯಿಗಳು ಕೆಲಸದಿಂದ ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ . ಇನ್ನು ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments