ಹೀಗೂ ಉಂಟಾ..! ಚಾಲೆಂಜ್’ಗಾಗಿ ವಿಷ ಕುಡಿದ ಪ್ರೇಯಸಿ..!!
ಪ್ರೀತಿಯಲ್ಲಿ ಯಾವಾಗಲೂ ಭ್ರಮೆ ಇರಬಾರದು ಅಂತ ಹೇಳ್ತಾರೆ.. ಆದರೆ ಕೆಲವೊಮ್ಮೆ ಪ್ರೀತಿ ಪಡೆಯುವುದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ ಮತ್ತು ಎಂತಹ ತ್ಯಾಗಕ್ಕೂ ಕೂಡ ಮುಂದಾಗುತ್ತಾರೆ. ಆದರೆ ಇಲ್ಲಿ ಪ್ರಿಯಕರ ಮಾಡಿದ ಚಾಲೆಂಜ್ ಗೆ ಯುವತಿಯೊಬ್ಬಳು ವಿಷ ಕುಡಿದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಆಲವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿತ್ತಿಗನುರು ಗ್ರಾಮದಲ್ಲಿ ನಡೆದಿದೆ. ಹರೀಶ್ ಚಾಲೆಂಜ್ ಮಾಡಿದ ಪ್ರಿಯಕರನಾಗಿದ್ದು, ದಿವ್ಯ ಸಾವನ್ನಪ್ಪಿದ ಪ್ರೇಯಸಿಯಾಗಿದ್ದಾರೆ. ಕಳೆದ ಮಂಗಳವಾರ ಈ ಘಟನೆಯು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ..
ಹರೀಶ್ ಮತ್ತು ದಿವ್ಯ ಪರಸ್ಪರ ಪ್ರೀತಿಸುತ್ತಿದ್ದಾರೆ...ಇಬ್ಬರು ಒಂದು ದಿನ ಭೇಟಿಯಾಗಿದ್ದು… ಈ ವೇಳೆ ನನ್ನ ಮೇಲೆ ಪ್ರೀತಿ ನಿನಗೆ ನಿಜವಾದ ಪ್ರೀತಿ ಇದ್ದರೆ ವಿಷ ಕುಡಿ ಎಂದು ಹರೀಶ್ ದಿವ್ಯ ಚಾಲೆಂಜ್ ಮಾಡಿದ್ದಾನೆ. ದಿವ್ಯ ಪ್ರಿಯಕರನ ಮಾತನ್ನು ನಂಬಿ ವಿಷ ಕುಡಿದಿದ್ದಾಳೆ.. ನಂತರ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಒಂದು ದಿನದ ನಂತರ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಪ್ರಿಯಕರ ಹರೀಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಿವ್ಯ ಸಾವನ್ನಪ್ಪಿದ ವಿಷಯ ತಿಳಿದು ಆರೋಪಿ ಹರೀಶ್ ಪರಾರಿಯಾಗಿದ್ದಾನೆ. ಈ ಘಟನೆ ಬೆಂಗಳೂರಿನ ಆಲವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
Comments