ಮಕ್ಕಳಿಗೆ ಕೇಕ್, ಕೋಲಾ ಕುಡಿಸಿದ ತಪ್ಪಿಗೆ ಜೈಲು ಪಾಲಾದ ಅಪ್ಪ..!

ಸಾಮಾನ್ಯವಾಗಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದು ಪೋಷಕರ ಕರ್ತವ್ಯವಾಗಿರುತ್ತದೆ.ಮಕ್ಕಳ ಲಾಲನೆ ಪಾಲನೆ ಪೋಷಣೆ ಎಲ್ಲವೂ ಕೂಡ ತಂದೆ ತಾಯಿಯ ಕರ್ತವ್ಯವಾಗಿರುತ್ತದೆ.. ಒಂದು ವೇಳೆ ಗಂಡ ಹೆಂಡತಿ ಇಬ್ಬರು ದೂರವಾದರೆ ಮಕ್ಕಳನ್ನು ನೋಡಿಕೊಳ್ಳುವುದೇ ಒಂದು ಚಿಂತೆಯಾಗಿಬಿಡುತ್ತದೆ. ಅದೇ ರೀತಿಯಾಗಿ ಪ್ರಾನ್ಸ್’ನಲ್ಲೂ ಕೂಡ ಒಂದು ಜೋಡಿ ಜಗಳವಾಡಿಕೊಂಡು ದೂರ ದೂರವಾಗಿದ್ದಾರೆ. ಬೇರೆಯಾಗಿದ್ದ ತಂದೆ ತನ್ನ ಇಬ್ಬರು ಗಂಡು ಮಕ್ಕಳನ್ನು ತಾನೇ ನೋಡಿಕೊಳ್ಳುತ್ತಿದ್ದನು.
ಆದರೆ ಆತ ಮಹಾನ್ ಕುಡುಕನಾಗಿದ್ದನು. ಆತನ ಮನೆಯಲ್ಲಿ ಮಕ್ಕಳಿಗೆ ತಿನ್ನಲು ಬೇಕಾಗಿದ್ದ ಮೂಲಭೂತ ಆಹಾರದ ಸೌಕರ್ಯ ಇರಲಿಲ್ಲ.. ಮಕ್ಕಳಿಗೆ ಹಸಿವಾದಗಲೆಲ್ಲಾ ತಿನ್ನಲು ಕೇಕ್ ಮತ್ತು ಕೋಕ್’ಗಳನ್ನೆ ಕೊಡುತ್ತಿದ್ದನು. ದಿನಪೂರ್ತಿ ಮಕ್ಕಳು ಕೇಕ್ ಮತ್ತು ಕೋಕ್ ತಿಂದುಕೊಂಡೆ ಕಾಲ ಕಳೆಯುತ್ತಿದ್ದವು. ಆದರೆ ಇದೀಗ ಇಂತಹ ಆಹಾರವನ್ನೇ ಸೇವಿಸಿ ಮಕ್ಕಳ ಹಲ್ಲುಗಳು ಉದುರುವ ಹಂತಕ್ಕೆ ಬಂದಿದ್ದು, ಒಬ್ಬನಿಗೆ ಮಾತಾಡಲೂ ಸರಿಯಾಗಿ ಬರುತ್ತಿಲ್ಲ. ಇದೀಗ ಇಬ್ಬರನ್ನೂ ಮಕ್ಕಳ ಯೋಗ ಕ್ಷೇಮ ಕೇಂದ್ರಕ್ಕೆ ಸೇರಿಸಲಾಗಿದೆ. ತಂದೆ ಮಾಡಿದ ತಪ್ಪಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಮಕ್ಕಳನ್ನು ನೋಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.. ಹಾಗಾಗಿ ಪೋಷಕರು ಒಟ್ಟಾಗಿ ಇದ್ದು ಮಕ್ಕಳನ್ನು ನೋಡಿಕೊಂಡರೆ ಒಳಿತು.
Comments