ಕುಡಿದ ಮತ್ತಿನಲ್ಲಿ ರೆಸ್ಟೋರೆಂಟ್’ನಲ್ಲಿ ಗಲಾಟೆ ಮಾಡಿದ ಸುನಾಮಿ ಕಿಟ್ಟಿ
ಸುನಾಮಿ ಕಿಟ್ಟಿ.. ರಿಯಾಲಿಟಿ ಷೋ ನಿಂದಲೇ ಒಂದಿಷ್ಟು ಹೆಸರು ಮಾಡಿದವರು.. ಇದೀಗ ಮಾಜಿ ಬಿಗ್ ಬಾಸ್ ಸ್ಪರ್ಧಿಯಾದ ಸುನಾಮಿ ಕಿಟ್ಟಿ ಅವರು ಕುಡಿದ ಮತ್ತಿನಲ್ಲಿ ರೆಸ್ಟೋರೆಂಟ್ ನಲ್ಲಿ ಪುಂಡಾಟಿಕೆ ಮಾಡಿದ ಘಟನೆ ಭಾನುವಾರ ರಾತ್ರಿ ನಗರದ ಮಾಲ್ ವೊಂದರಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಒರಾಯನ್ ಮಾಲ್ ನಲ್ಲಿರುವ ರೆಸ್ಟೋರೆಂಟ್ ಗೆ ಭಾನುವಾರ ರಾತ್ರಿ ತನ್ನ ಸ್ನೇಹಿತರ ಜೊತೆ ಮದ್ಯ ಸೇವನೆಗೆ ಎಂದು ಸುನಾಮಿ ಕಿಟ್ಟಿ ಬಂದಿದ್ದರು... ಈ ಸಮಯದಲ್ಲಿ ರೆಸ್ಟೋರೆಂಟ್ ಸಿಬ್ಬಂದಿ ಬಳಿ ಒಂದು ಸಿಗರೇಟ್ ನೀಡುವಂತೆ ಕೇಳಿದ್ದಾರೆ. ಆದರೆ ಒಂದು ಸಿಗರೇಟ್ ಸಿಗಲ್ಲ. ಪುಲ್ ಪ್ಯಾಕ್ ತೆಗೆದುಕೊಳ್ಳಿ ಎಂದು ಸಿಬ್ಬಂದಿ ಹೇಳಿದ್ದರು ಈ ವಿಚಾರವಾಗಿ ಕಿಟ್ಟಿ ಹಾಗೂ ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಗಲಾಟೆ ನಡೆದಾಗ ಕುಡಿದ ಮತ್ತಿನಲ್ಲಿದ್ದ ಕಿಟ್ಟಿ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಈ ವಿಷಯವಾಗಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
Comments