ದಂಡ ಕಟ್ಟಿಸ್ಕೊಂಡು ಗಾಡಿ ಬಿಡಲೇ, ಬಂಡವಾಳ ಹಾಕಿರೋದು ನಮ್ಮಪ್ಪ, ನಿಮ್ಮಪ್ಪ ಅಲ್ಲ ಎಂದು ಪೊಲೀಸ್ ಪೇದೆಗೆ ಅವಾಜ್ ಹಾಕಿದ ಯುವಕ
ಬೈಕ್ ತಗೊಂಡು ರಸ್ತೆಗೆ ಇಳಿದರೆ ಸಾಕು ಒಂದೆ ಭಯ.. ಎಲ್ಲಿ ಪೋಲಿಸರು ಇಡ್ಕೊಬಿಡ್ತಾರೆ ಅಂತ.. ಸಿಕ್ಕಿಹಾಕೊಂಡ್ರೆ ಮುಗಿತು ಕಥೆ.. ಲೈಸೆನ್ಸ್ ತೋರ್ಸು ಅಂತಾರೆ… ಲೈಸೆನ್ಸ್ ತೋರಿಸಿದರೆ ಡಾಕ್ಯುಮೆಂಟ್ ಅಂತಾರೆ..ಡಾಕ್ಯುಮೆಂಟ್ ತೋರಿಸಿದ್ರೆ ಮತ್ತೊಂದು…ಒಟ್ಟಿನಲ್ಲಿ ಒಂದಲ್ಲ ಒಂದೇಳಿ ಪೈನ್ ಕಟ್ಟೊವರೆಗೂ ಬಿಡಲ್ಲ.. ಕೆಲವೊಬ್ಬರು ಇರ್ತಾರೆ…ಗಾಡಿ ಕೀ ನೇ ಕಿತ್ತು ಇಟ್ಕೊಬಿಡ್ತಾರೆ.. ಅಂತಹವರಿಗೆ ವಾಹನ ಸವಾರನೊಬ್ಬ ಸಖತ್ತಾಗಿಯೇ ಹವಾಜ್ ಹಾಕಿದ್ದಾನೆ..
ಪೊಲೀಸ್ ಪೇದೆಯು ಎಂದಿನಂತೆ ಸಾತನೂರು ಸರ್ಕಲ್ ಬಳಿ ವಾಹನಗಳ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಪೇದೆ ಯುವಕನ ಸ್ಕೂಟಿಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಸ್ಕೂಟಿಯನ್ನು ವಶಕ್ಕೆ ಪಡೆಯುತ್ತಿದ್ದಂತೆ ಕೋಪಗೊಂಡ ಯುವಕ ಗಾಡಿಗೆ ಬಂಡವಾಳ ಹಾಕಿರೋದು ನಮ್ಮಪ್ಪ, ನಿಮ್ಮಪ್ಪ ಅಲ್ಲ. ನಿಮ್ಮ ಅಂತಹವರನ್ನು ಬೆಂಗಳೂರಲ್ಲಿ ತುಂಬ ಜನರನ್ನು ನೋಡಿದ್ದೇನೆ. ಫೈನ್ ಕಟ್ಟಿಸಿಕೊಂಡು ಗಾಡಿ ಬಿಡಲೇ ಎಂದು ಅವಾಜ್ ಹಾಕಿದ್ದಾನೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Comments