ಮೊದಲ ಗಂಡನ ನೆನಪಿನಲ್ಲಿ ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾದ ಗೃಹಿಣಿ..!! ವಿಡಿಯೋ ವೈರಲ್
ಗೃಹಿಣಿಯೊಬ್ಬಳು ಮೊದಲನೆ ಗಂಡನ ಕೂರಗಿನಲ್ಲಿಯೇ ಸೆಲ್ಫಿ ವಿಡಿಯೋವನ್ನು ಮಾಡಿ, ತನ್ನ ಮೊದಲ ಗಂಡನನ್ನು ನೆನಸಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಈಜೀಪುರದಲ್ಲಿ ನಡೆದಿದೆ.
ಅಂಕಿತಾ ಪೂಜಾರಿ (32) ಆತ್ಮಹತ್ಯೆ ಮಾಡಿಕೂಂಡಿರುವ ಗೃಹಿಣಿಯಾಗಿದ್ದು ಮೊದಲ ಗಂಡನಿಂದ ವಿಚ್ಛೇದನ ಪಡೆದ ನಂತರ ಸೋನಮ್ ಎಂಬಾತನೊಂದಿಗೆ ಅಂಕಿತಾ ವಿವಾಹವಾಗಿದ್ದರು. ಆದರೆ, ಇತ್ತೀಚೆಗೆ ಎರಡನೇ ಗಂಡ ಸೋನಂ ಕೂಡ ಅಂಕಿತಾಗೆ ಕೈ ಕೊಟ್ಟಿದ್ದ ಎಂದು ಹೇಳಲಾಗುತ್ತಿದೆ... ಹೀಗಾಗಿ ಈ ಹಿಂದೆ ಮೊದಲ ಗಂಡನನ್ನು ನೆನೆದು ಭಾವುಕಳಾಗಿ ನೇಪಾಳಿ ಭಾಷೆಯಲ್ಲಿ ಮಾತನಾಡಿ ಸೆಲ್ಫಿ ವಿಡಿಯೋ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಈ ರೀತಿಯ ಲೈವ್ ಸೂಸೈಡ್ ಗಳಿಂದ ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಪೋಷಕರ ಆತಂಕವಾಗಿದೆ.
Comments