ಫುಟ್‍ಪಾತ್ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವಕನ ಕೊಲೆ..!

ಏನ್ ಕಾಲ ಬಂತಪ್ಪ ಪುಟ್ ಬಾತ್ ನಲ್ಲಿ ಸೆಲ್ಫಿ ತೆಗೆದುಕೊಳ್ಳೊದಕ್ಕೂ ಹಿಂದೆ ಮುಂದೆ ನೋಡಬೇಕು ಇನ್ನು ಮೇಲೆ.. ಯಾಕೆ ಅಂತ ಯೋಚನೆ ಮಾಡುತ್ತಿದ್ದೀರಾ… ಫುಟ್‍ಪಾತ್ ಬಳಿ ಇಬ್ಬರು ಸ್ನೇಹಿತರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸುತ್ತಾ ಜಗಳವಾಡಿ ಒಬ್ಬನ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವಂತಹ ಘಟನೆ ಉಪ್ಪಾರ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೇರಳದ ಗೌತಮ್ (20) ಕೊಲೆಯಾದ ಯುವಕ. ಹಲಸೂರು ಗೇಟ್‍ನ ಸಿಂಡಿಕೇಟ್ ಬ್ಯಾಂಕ್ ಬಳಿ ಗೌತಮ್ ಹಾಗೂ ಆತನ ಸ್ನೇಹಿತ ಸೆಲ್ಫಿ ತೆಗೆಯುವ ವೇಳೆ ಗೌತಮ್ ಹಾಗೂ ದುಷ್ಕರ್ಮಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ದುಷ್ಕರ್ಮಿಗಳು ಚಾಕುವಿನಿಂದ ಗೌತಮ್ ಎದೆಗೆ ಚುಚ್ಚಿ ಓಡಿಹೋಗಿದ್ಧಾರೆ. ಗಂಭೀರ ಗಾಯಗೊಂಡ ಗೌತಮ್‍ನನ್ನು ಸ್ನೇಹಿತನೇ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.. ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿಡಲಾಗಿದೆ. ಉಪ್ಪಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳಿಗಾಗಿ ತನಿಖಾ ಕಾರ್ಯವನ್ನು ಆರಂಭಿಸಿದ್ದಾರೆ.
Comments