ಅಪಘಾತವಾಗಿ ರಸ್ತೆಯಲ್ಲಿ ಒದ್ದಾಡಿದರೂ ಸಹಾಯಕ್ಕೆ ಬರದೇ ಮಾನವೀಯತೆ ಮರೆತ ಜನ

ಸುಮಾರು ಒಂದು ಗಂಟೆಗಳ ಸಮಯ ಅಪಘಾತವಾಗಿ ಗಾಯಾಳು ರಸ್ತೆಯಲ್ಲಿಯೇ ನರಳಾಡುತ್ತಾ ಬಿದ್ದಿದ್ದರು ಅಲ್ಲಿಯ ಜನರು ಆಸ್ಪತ್ರೆಗೆ ಸೇರಿಸದೇ ಮಾನವೀಯತೆ ಮರೆತು ವರ್ತಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಂಚಿಪುರ ಗ್ರಾಮದಲ್ಲಿ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ನಡೆದ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಂಚಿಪುರ ರಸ್ತೆಯಲ್ಲಿ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಿದ್ದೇಶ್ (26) ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದರು. ಜನ ನೋಡುತ್ತಾ ನಿಂತಿದ್ದರೆ ಹೊರತು ಯಾರು ಸಹಾಯಕ್ಕೆ ಹೋಗಿಲ್ಲ. ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ನಿವಾಸಿ ಸಿದ್ದೇಶ್ (26) ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನಾಗಿದ್ದು ಸ್ಥಿತಿ ಗಂಭೀರವಾಗಿದೆ.
Comments