ಎಂಥಾ ತಂದೆನಪ್ಪಾ..! ಹೆಣ್ಣು ಎಂಬ ಕಾರಣಕ್ಕೆ 20 ದಿನದ ಹಸುಳೆಯನ್ನು ಕೊಂದ ತಂದೆ..!!
ಏನ್ ಜನನಪ್ಪಾ.. ಕಾಲ ಬದಲಾದರೂ ಇನ್ನೂ ನಮ್ ಜನ ಮಾತ್ರ ಬದಲಾಗುತ್ತಿಲ್ಲ.. ಹೆಣ್ಣು ಮಗು ಹುಟ್ಟಿದೆ ಅಂತ ಅದನ್ನು ಸಾಯಿಸೆಬಿಡೋದಾ..? ಎಂತ ಪಾಪಿ ಇರಬೇಕು ಅಲ್ವ..ಹೆಣ್ಣು ಮಗು ಎಂಬ ಕಾರಣಕ್ಕೆ 20 ದಿನದ ಮಗುವನ್ನು ತಾಯಿಯ ಎದುರಲ್ಲೇ ಅದರ ತಂದೆಯೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಗೋಕುಲ್ ಮಗುವನ್ನು ಕೊಂದ ಆರೋಪಿ. ಈತ ಹೆಣ್ಣು ಮಗು ಎಂಬ ಕಾರಣಕ್ಕೆ ಕೊಲೆ ಮಾಡಿರುವುದಾಗಿ ತಿಳಿದು ಬಂದಿದ್ದು, ಗುರುವಾರ ರಾತ್ರಿ ಸುಬ್ಬನಪಾಳ್ಯ ಬಳಿ ಈ ಘಟನೆಯು ನಡೆದಿದೆ. ಆರೋಪಿ ಗೋಕುಲ್ ನೇಪಾಳ ಮೂಲದವನಾಗಿದ್ದಾನೆ. ಬೆಂಗಳೂರಿಗೆ ಬಂದು ನೆಲೆಸಿದ್ದ ಈತ ಸ್ವಿಮ್ಮಿಂಗ್ ಪೂಲ್ ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಈ ಘಟನೆ ಸಂಬಂಧ ಪತಿ ವಿರುದ್ಧವೇ ಪತ್ನಿಯೇ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಬಾಣಸವಾಡಿ ಪೊಲಿಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿ ಗೋಕುಲ್ ನನ್ನು ವಿಚಾರಣೆ ನಡೆಸುತ್ತಿದ್ದಾರೆ.ಆದರೂ ನಮ್ಮ ಜನ ಇನ್ನೂ ಏಕೆ ಬದಲಾಗಿಲ್ಲ ಅನ್ನೋದೆ ಗೊತ್ತಾಗಿಲ್ಲ.
Comments