ಹೆಣ್ಣನ್ನು ನಂಬಬೇಡಿ ಎಂದೇಳಿ ಲೈವ್ ಸೂಸೈಡ್ ಮಾಡಿಕೊಂಡ ಯುವಕ..!

ಇತ್ತಿಚಿಗೆ ಲೈವ್ ಸೂಸೈಡ್’ಗಳು ಹೆಚ್ಚಾಗಿವೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕೆ.ಕೆ.ಪಾಳ್ಯದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೂ ಮುನ್ನ ರಾಷ್ಟ್ರಗೀತೆ ಹಾಡಿ ಸೂಸೈಡ್ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ನಿರಂಜನ್(36) ಎಂದು ತಿಳಿದು ಬಂದಿದ್ದು, ಮೃತ ನಿರಂಜನ್ ಸಾಯುವ ಮುನ್ನ ಫೇಸ್ ಬುಕ್ ನಲ್ಲಿ ಲೈವ್ ಬಂದ್ ಹೆಣ್ಣು ಮಕ್ಕಳನ್ನು ನಂಬಬೇಡಿ, ಹೆಣ್ಣುಮಕ್ಕಳು ಯಾವಾಗಲೂ ಮೋಸ ಮಾಡುತ್ತಾರೆ. ನಾವು ಹೆಣ್ಣನ್ನ ದೇವತೆ ಎಂದು ಪೂಜಿಸುತ್ತೇವೆ.ಆದರೆ ನೋ ಯ್ಯೂಸ್ ಎಂದು ಹೇಳಿ ಬೇಸರದಿಂದ ನೇಣಿಗೆ ಶರಣಾಗಿದ್ದಾನೆ. ಇನ್ನು ನಿರಂಜನ್ ಸಾವಿಗೆ ಪ್ರೀತಿ ಕಾರಣ ಎನ್ನಲಾಗುತ್ತಿದ್ದು, ಘಟನೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆಯನ್ನು ಮಾಡುತ್ತಿದ್ದಾರೆ.
Comments