ಬಾಲಕನನ್ನು ಬಲಿ ತೆಗೆದುಕೊಂಡ ಡೆಡ್ಲಿ ಬ್ಲೂವೆಲ್ ಗೇಮ್..!
ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಸ್ವಲ್ಪ ಯೋಚಿಸಿ ಅಂತ ಹೇಳೋದು ಇದಕ್ಕೆ… ಮಕ್ಕಳ ಕೈಗೆ ಮೊಬಥಲ್ ಸಿಕ್ಕಿಬಿಟ್ಟರೆ ಆ ಗೇಮ್ ಈ ಗೇಮ್ ಅಂತ ಾಟವಾಡಿಕೊಂಡು ಕೂತು ಬಿಡ್ತಾರೆ. ಬ್ಲೂವೇಲ್ ಗೇಮ್ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು.ಜಗತ್ತಿನಾದ್ಯಂತ ಭಾರೀ ಸುದ್ದಿ ಮಾಡಿದ್ದ ಡೆಡ್ಲಿ ಬ್ಲೂವೆಲ್ ಗೇಮ್ ಗೆ ಬಾಲಕನೋರ್ವ ಬಲಿಯಾಗಿರುವ ಘಟನೆ ಕಲಬುರಗಿಯ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.
ಸಮರ್ಥ್ (12) ಮನೆಯಲ್ಲಿ ಬ್ಲೂವೆಲ್ ಗೇಮ್ ನಿಂದಾಗಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸೇಂಟ್ ಮೇರಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದ ಬಾಲಕ ಕಳೆದ ಕೆಲ ದಿನಗಳಿಂದ ಓದುವುದನ್ನು ಬಿಟ್ಟು ಮಾನಸಿಕವಾಗಿ ನೊಂದಂತೆ ವರ್ತಿಸುತ್ತಿದ್ದನ್ನು ಎಂದು ತಿಳಿದುಬಂದಿದೆ. ಬ್ಲೂವೆಲ್ ಗೇಮ್ ನಿಂದಾಗಿ ನಿನ್ನೆ ರಾತ್ರಿ 7 ಗಂಟೆಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ.
Comments