ಹೆಚ್ಚು ದರ ಕೇಳಿದ್ದಕ್ಕೆ ಆಟ್ರೋ ಡ್ರೈವರ್ ಕಥೆ ಮುಗಿಸಿದ ಪ್ರಯಾಣಿಕರು
ಹೆಚ್ಚುವರಿ ದರವನ್ನು ಕೇಳಿದ ಆಟ್ರೋ ಡ್ರೈವರ್ ನನ್ನು ಪ್ರಯಾಣಿಕರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ರಾತ್ರಿ ವೇಳೆ ಸೇವೆ ಹಾಗೂ ಹೆಚ್ಚುವರಿ ಪ್ರಯಾಣಿಕರಿದ್ದ ಕಾರಣ ಆಟೋ ಡ್ರೈವರ್ ಹೆಚ್ಚುವರಿ ಹಣ ನೀಡುವಂತೆ ಕೇಳಿದ್ದಾನೆ. ಇದರಿಂದ ಕುಪಿತಗೊಂಡ ಪ್ರಯಾಣಿಕರು ಚಾಕುವಿನಿಂದ 26 ವರ್ಷದ ಆಟೋ ಡ್ರೈವರ್ ಮೇಲೆ ಹಲ್ಲೆ ನೆಡೆಸಿ ಕೊಂದಿದ್ದಾರೆ.
ದಕ್ಷಿಣ ದೆಹಲಿಯ ಕಾನ್ಪುರದಿಂದ ಕೊನ್ನಾಟ್ ಪ್ರದೇಶಕ್ಕೆ ತೆರಳಲು ನಾಲ್ವರು ಬಾಡಿಗೆಗೆ ಆಟೋ ಪಡೆದುಕೊಂಡಿದ್ದಾರೆ. ಮಾರ್ಗ ಮಧ್ಯದಲ್ಲಿ ರಾತ್ರಿ ಸೇವೆ ಹಾಗೂ ಹೆಚ್ಚುವರಿ ಪ್ರಯಾಣಿಕರಿದ್ದ ಕಾರಣ ಹೆಚ್ಚುವರಿ ದರ ನೀಡುವಂತೆ ಆಟೋ ಡ್ರೈವರ್ ಕೇಳಿದ್ದಾನೆ. ಇದರಿಂದಾಗಿ ವಾಗ್ವಾದ ನಡೆದು ಚಾಕುವಿನಿಂದ ಇರಿದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆಯಲ್ಲಿ ಬಾಯ್ಬಿಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಕೊನ್ನಾಟ್ ಪ್ರದೇಶದಲ್ಲಿಯೇ ಇದ್ದ ಪೊಲೀಸರು ಈ ಹತ್ಯೆ ಮಾಡಿದ 19 ವರ್ಷದ ಯುವಕನೊಬ್ಬನನ್ನು ಬಂಧಿಸಿದ್ದಾರೆ. ನಂತರ ಇನ್ನಿಬರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ನವದೆಹಲಿ ಉಪ ಪೊಲೀಸ್ ಆಯುಕ್ತ ಮಧುರ್ ವರ್ಮಾ ತಿಳಿಸಿದ್ದಾರೆ.
Comments