ತಾಯಿಯನ್ನು ಕೆಟ್ಟದಾಗಿ ಕಂಡವನ ರುಂಡ ಕಡಿದ ಯುವಕ..!ವಿಡಿಯೋ ವೈರಲ್

ತಾಯಿಯ ಮೇಲೆ ಯಾರಾದರೂ ಕಣ್ಣಾಕಿದರೆ ಮಗನಾದವನು ಸುಮ್ಮನಿರುತ್ತಾನಾ ಹೇಳಿ.. ಯುವಕನೊಬ್ಬ ತನ್ನ ತಾಯಿಗೆ ಕಣ್ಣಾಕಿದ ಎಂದು ಮಗ ಆ ಯುವಕನ ರುಂಡ ಕತ್ತರಿಸಿರುವ ಘಟನೆ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಾಗಿಲು ಗ್ರಾಮದ ಪಶುಪತಿ (24) ತಲೆ ಕಡಿದು ಅದನ್ನು ಹಿಡಿದ ಮಳವಳ್ಳಿ ಪೊಲೀಸ್ ಠಾಣೆಗೆ ಯುವಕ ಬಂದಿದ್ದಾನೆ. ಅದೇ ಗ್ರಾಮದ ಗಿರೀಶ್ (35) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಆರೋಪಿ ಪಶುಪತಿಯು ತನ್ನ ತಾಯಿಗೆ ಗಿರೀಶ್ ಕೆಟ್ಟದಾಗಿ ಕಣ್ಣ ಸನ್ನೆ ಮಾಡಿದ್ದಾನೆ. ಹಾಗಾಗಿ ಆತನ ರುಂಡ ಕತ್ತರಿಸಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments