ಪ್ರೀತಿಸಿ ಮದುವೆಯಾದ ನವ ದಂಪತಿಗಳು ಆತ್ಮಹತ್ಯೆಗೆ ಶರಣು
ಪರಸ್ಪರ ಇಬ್ಬರು ಪ್ರೀತಿಸಿ ಕಳೆದ 20 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ದಂಪತಿಗಳು ಒಂದೇ ಕುಣಿಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರ್ಘಟನೆಯು ಮಂಡ್ಯ ಜಿಲ್ಲೆಯ ಅಂಚೆದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ತಾಲ್ಲೂಕು ಹೆಬ್ಬಕವಾಡಿ ಗ್ರಾಮದ ವಾಸಿಗಳಾದ ಅಶ್ವಿನಿ (21) ಮತ್ತು ನವೀನ್ (24) ಪರಸ್ಪರ ಪ್ರೀತಿಸಿ ಕಳೆದ 20 ದಿನಗಳ ಹಿಂದೆಯಷ್ಟೇ ತಮ್ಮ ಮನೆಯವರನ್ನು ಒಪ್ಪಿಸಿ ಸಂಪ್ರದಾಯದಂತೆ ವರಮಹಾಲಕ್ಷ್ಮಿ ಹಬ್ಬದ ದಿನವೆ ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ವಿವಾಹವಾಗಿದ್ದರು ಎಂದು ಹೇಳಲಾಗುತ್ತಿದೆ.. ಈ ದಂಪತಿಗಳ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.. ಸಾಯುವುದಕ್ಕೂ ಮೊದಲೇ ಪತ್ರವೊಂದನ್ನು ಬರೆದಿಟ್ಟಿರುವ ದಂಪತಿಗಳು ತಮ್ಮ ಸಾವಿಗೆ ಬೇರೆ ಯಾರೂ ಸಹ ಕಾರಣರಲ್ಲ. ನಾವಿಬ್ಬರೂ ಆಸೆಯಿಂದ ಸಾವಿಗೆ ಶರಣಾಗುತ್ತಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
Comments