ನಿರ್ದೇಶಕ ಎಸ್. ನಾರಾಯಣ್ ಗೆ ಜ್ಯೋತಿಷಿಯಿಂದ 40 ಲಕ್ಷ ವಂಚನೆ!

ತಮಿಳುನಾಡಿನ ಜ್ಯೋತಿಷಿಯೊಬ್ಬರು ನಿರ್ದೇಶಕ ಎಸ್. ನಾರಾಯಣ್ ಅವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಆರೋಪ ಇದೀಗ ಕೇಳಿ ಬಂದಿದೆ.
ತಮಿಳುನಾಡಿನ ಮಂದಾರಮೂರ್ತಿ ಎಂಬುವರು ಸಾಲ ಕೊಡಿಸುವುದಾಗಿ ನಂಬಿಸಿ 40 ಲಕ್ಷ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಂದಾರಾ ಮೂರ್ತಿ ತಮಿಳುನಾಡಿನ ಪ್ರಖ್ಯಾತ ಜನಾಂಗವೊಂದರ ನಾಯಕರಾಗಿದ್ದು, 70 ಕೋಟಿ ಸಾಲ ನೀಡುವುದಾಗಿ ತಿಳಿಸಿದ್ದರು. ಹೀಗಾಗಿ ಸಾಲ ಪಡೆಯಲು ಎಸ್.ನಾರಾಯಣ್, ಮಂದಾರ ಮೂರ್ತಿಗೆ ಮುಂಗಡ ಶುಲ್ಕವಾಗಿ 45 ಲಕ್ಷ ರೂ. ನೀಡಿದ್ದರು. ಆದರೆ ಈಗ ಸಾಲವೂ ಇಲ್ಲ, ಕೊಟ್ಟ ಹಣವನ್ನೂ ಹಿಂತಿರುಗಿಸದೇ ಮೋಸ ಮಾಡಿದ್ದಾರೆ ಎಂದು ಎಸ್. ನಾರಾಯಣ್ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Comments