'ಜೆಡಿಎಸ್' ಕಾರ್ಯಕರ್ತನಿಂದ 'ಬಿಜೆಪಿ' ಮಾಜಿ ಶಾಸಕನಿಗೆ ಫೇಸ್ ಬುಕ್ ನಲ್ಲಿ ಕೊಲೆ ಬೆದರಿಕೆ..!!!

ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಶಾಸಕ ಗೌರಿ ಶಂಕರ್ ಮತ್ತು ಮಾಜಿ ಸಂಸದ ಸುರೇಶ್ ಗೌಡರ ಜಟಾಪಟಿಯನ್ನು ಅವರ ಅಭಿಮಾನಿಗಳು ಫೇಸ್ ಬುಕ್ ನಲ್ಲಿ ಮುಂದುವರಿಸಿದ್ದು ಇಬ್ಬರ ನಡುವೆ ಸಾಕಷ್ಟು ಜಟಾಪಟಿಗಳು ತಾರಕಕ್ಕೇರಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಬೈದಾಡಿಕೊಳ್ಳುತ್ತಿರುವ ಜೆ ಡಿ ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ಸುರೇಶ್ ಗೌಡರನ್ನು ಸಾಯಿಸಿ ಬಿಡೋಣ ಎಂಬ ಕಾಮೆಂಟ್ ಅನ್ನು ಜೆಡಿಎಸ್ ಕಾರ್ಯಕರ್ತ ಪ್ರಮೀನ್ ಸೌಮ್ಯ ಎಂಬಾತ ಮಾಡಿದ್ದಾನೆ. ಈ ರೀತಿ ಕಾಮೆಂಟ್ ಮಾಡಿರುವರ ಜೆಡಿಎಸ್ ಕಾರ್ಯಕರ್ತರನ್ನು ಕೂಡಲೇ ಬಂಧಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ. ಈ ಕೂಡಲೇ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಅವರಿಗೆ ಕೊಲೆ ಬೆದರಿಕೆ ಇರುವುದರಿಂದ ಹೆಚ್ಚು ಭದ್ರತೆ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಘಟಕದ ವತಿಯಿಂದ ಮನವಿಯನ್ನು ಸಲ್ಲಿಸಲಾಗಿದೆ.
Comments