ಮಾಲ್’ನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ತುಳಸಿ ಪ್ರಸಾದ್

29 Aug 2018 4:19 PM | Crime
347 Report

ಸಾಮಾಜಿಕ ಜಾಲತಾಣದಲ್ಲಿ ಕರ್ಕಶ ಧ್ವನಿಯಿಂದಲೇ ಫೇಮಸ್ ಆಗಿದ್ದಂತಹ ತುಳಸಿ ಪ್ರಸಾದ್ ಕಳ್ಳತನ ಮಾಡಲು ಹೋಗಿ ಸೆಕ್ಯೂರಿಟಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ, ಬೆಂಗಳೂರಿನ ಬಿಗ್ ಬಜಾರ್ ನಲ್ಲಿ ಕಳ್ಳತನ ಮಾಡಿ ತುಳಸಿ ಪ್ರಸಾದ್ ಸಿಕ್ಕಿಬಿದ್ದಿದ್ದು ಆ ಸ್ಥಳದಲ್ಲಿ ಇದ್ದವರು ತುಳಸಿ ಪ್ರಸಾದ್’ಗೆ ಹಿಗ್ಗಾಮುಗ್ಗಾ ಕ್ಲಾಸ್ ತಗೆದುಕೊಂಡಿದ್ದಾರೆ.

ಬಿಗ್ ಬಜಾರ್ ಗೆ ಹೋಗಿದ್ದ ತುಳಸಿ ಪ್ರಸಾದ್ ಜರ್ಕಿನ್ ಹಾಕಿಕೊಂಡು ಕಳ್ಳತನ ಮಾಡಿದ್ದಾರೆ, ಹಲವು ವಸ್ತುಗಳನ್ನ ಕದ್ದ ನಂತರ ಸೆಕ್ಯೂರಿಟಿ ಕೈಗೆ ಸಿಕ್ಕಿಬಿದ್ದ ತುಳಸಿ ಪ್ರಸಾದ್ ಗೆ ಸಿಬ್ಬಂದಿಗಳೆಲ್ಲ ಸೇರಿ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ ಏಕೆ ವಸ್ತುಗಳನ್ನ ಕದಿಯುತ್ತಿರುವೆ., ಫೇಸ್ಬುಕ್ ನಲ್ಲಿ ಫ್ಯಾನ್ಸ್ ಹೊಂದಿದ್ದೀರಾ, ತುಂಬಾ ಜನ ಲೈವ್ ಮಾಡುತ್ತಾರೆ ಹೀಗೆ ಇರುವಾಗ ನಿನಗೆ ಕಳ್ಳತನ ಮಾಡಲು ನಾಚಿಕೆಯಾಗಲ್ವಾ ಎಂದು ಅಲ್ಲಿ ಇದ್ದ ಸಿಬ್ಬಂದಿಗಳು ತರಾಟೆಗೆ ತಗೆದುಕೊಂಡಿದ್ದಾರೆ. ಬಿಗ್ ಬಾಸ್ ಗೆ ಹೋಗುವ ತುಳಸಿಪ್ರಸಾದ್ ಕೂಡ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ.  ಹೀಗಿರುವಾಗ ತುಳಸಿ ಪ್ರಸಾದ್ ಗೆ ಇದೆಲ್ಲಾ ಬೇಕಿತ್ತಾ ಅನಿಸೋದಿಲ್ವ

Edited By

Manjula M

Reported By

Manjula M

Comments