ಬಾರದ ಲೋಕಕ್ಕೆ ಪಯಣ ಬೆಳಸಿದ ತೆಲುಗು ನಟ ನಂದಮೂರಿ ಹರಿಕೃಷ್ಣ

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೆಪರ್ತಿ ಬಳಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ನಂದಮುರಿ ಹರಿಕೃಷ್ಣ ಅವರು ಬಾರದ ಲೋಕಕ್ಕೆ ಪಯಣ ಬೆಳಸಿದ್ದಾರೆ. ಆಂಧ್ರ ಮಾಜಿ ಸಿಎಂಆಗಿದ್ದಂತಹ ಎನ್ಟಿಆರ್ ಹಿರಿಯ ಪುತ್ರ ಇವರು. ಇವರ ಸಾವು ತೆಲುಗು ಚಿತ್ರರಂಗಕ್ಕೆ ತುಂಬಲಾರದ ನಷ್ಟದಂತಾಗಿದೆ.
ಸೀತಯ್ಯ, ಸೀತಾರಾಮು, ಸಿವರಾಮ ರಾಜು, ಟೈಗರ್ ಹರಿಶ್ಚಂದ್ರ ಪ್ರಸಾದ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ನಲಗುಂಡ ಬಳಿಯಲ್ಲಿ ಹರಿಕೃಷ್ಣ ಸೇರಿದಂತೆ ನಾಲ್ಕು ಮಂದಿ ಕಾರಿನಲ್ಲಿ ಹೋಗುತ್ತಿದ್ದರು. ಕಾರು ಮಗುಚಿ ಬಿದ್ದು ಹರಿಕೃಷ್ಣ ಅವರ ತಲೆಗೆ ತೀವ್ರ ಗಾಯವಾಗಿತ್ತು. ತಕ್ಷಣ ಅವರನ್ನು ನಾರ್ಕಟ್ಪಲ್ಲಿಯ ಕಾಮಿನೇನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
Comments