ಆಸ್ತಿಗಾಗಿ ಅಪ್ಪನ ಎರಡೂ ಕಣ್ಣನ್ನು ಕಿತ್ತ ನೀಚ ಮಗ..!

ಮಕ್ಕಳನ್ನು ತಂದೆ ತಾಯಿಗಳು ಎಷ್ಟು ಚೆನ್ನಾಗಿ ನೋಡಿಕೊಂಡಿರುತ್ತಾರೆ. ಆದರೆ ಇಲ್ಲಿ ಒಬ್ಬ ಪಾಪಿ ಮಗ ಆಸ್ತಿಗಾಗಿ ತನ್ನ ತಂದೆಯ ಕಣ್ಣನ್ನು ಕಿತ್ತು ಹಾಕಿ ಪೈಶಾಚಿಕ ಕೃತ್ಯ ಎಸಗಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ.
ಬೆಂಗಳೂರಿನ ಜೆಪಿ ನಗರದ ಶಾಕಾಂಬರಿ ನಗರದಲ್ಲಿ ಇಂದು ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ಘಟನೆಯಲ್ಲಿ ಪರಮೇಶ್ವರ್ ಎನ್ನುವವರು ತಮ್ಮ ಕಣ್ಣು ಕಳೆದುಕೊಂಡಿದ್ದಾರೆ. ನಿವೃತ್ತ ಸರ್ಕಾರಿ ನೌಕರನಾಗಿರುವ ಪರಮೇಶ್ವರ್ ಅವರ ಪತ್ನಿ ಇತ್ತೀಚಿಗೆ ತೀರಿಕೊಂಡಿದ್ದಾರೆ. ಇದೇ ವೇಳೆ ಆಸ್ತಿಗಾಗಿ ಪರಮೇಶ್ವರ್ ಮಗ ಇಂದು ತನ್ನ ತಂದೆ ಬಳಿಯಲ್ಲಿ ಗಲಾಟೆ ಮಾಡಿದ ವೇಳೆಯಲ್ಲಿ ಚೇತನ್, ಪರಮೇಶ್ವರ್ ಅವರು ಕಣ್ಣಿಗೆ ಕೈ ಬೆರಳು ಹಾಕಿ ಕಣ್ಣಿನ ಗುಡ್ಡೆಯನ್ನು ಹೊರಗೆ ಕಿತ್ತು ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಪರಮೇಶ್ವರ್ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಪರಮೇಶ್ವರ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಮಗ ಅಭಿಷೇಕ್ ಜೆಪಿ ನಗರದ ಪೋಲಿಸರ ವಶದಲ್ಲಿದ್ದಾನೆ.ಪೊಲೀಸರು ಸಧ್ಯ ವಿಚಾರಣೆ ನಡೆಸುತ್ತಿದ್ದಾರೆ.
Comments