ಪೋಷಕರೆ ಎಚ್ಚರ: ಭಾರತದಲ್ಲಿ ತನ್ನ ಮೊದಲ ಬಲಿಯನ್ನು ಪಡೆದ 'ಮೊಮೊ ಚಾಲೆಂಜ್’ ಆನ್’ಲೈನ್ ಗೇಮ್..!

ಈಗಾಗಲೇ ವಿಶ್ವಾದ್ಯಂತ ಬ್ಲೂವೇಲ್ ಚಾಲೆಂಜ್‌ನಿಂದಾಗಿ ಹಲವಾರು ಜೀವಗಳನ್ನು ಕಳೆದುಕೊಂಡಿದೆ. ಮತ್ತೊಂದು ಅಪಾಯಕಾರಿಯಾದ ಆನ್‌ಲೈನ್ ಆಟ ಮೊಮೊ ಚಾಲೆಂಜ್ ಭಾರತದಲ್ಲಿಯೆ ತನ್ನ ಮೊದಲ ಬಲಿಯನ್ನು ತೆಗೆದುಕೊಂಡಿದೆ ಎಂದು ಶಂಕಿಸಲಾಗಿದೆ.. ಅಜ್ಮೀರ್‌ನ 10ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ತನ್ನ ಮಣಿಗಂಟುಗಳನ್ನು ಕತ್ತರಿಸಿಕೊಂಡ ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತಮ್ಮ ಪುತ್ರಿಯ ಸಾವಿನಲ್ಲಿ ಆನ್‌ಲೈನ್ ಆಟದ ಕೈವಾಡದ ಬಗ್ಗೆ ವಿಚಾರಣೆ ನಡೆಸುವಂತೆ ಹೆತ್ತವರು ಆಗ್ರಹಿಸಿದ್ದಾರೆ.
ಆನ್‌ಲೈನ್ ಆಟದ ಅಂತಿಮ ಹಂತವನ್ನು ತಲುಪಿದ್ದಕ್ಕೆ ವಿದ್ಯಾರ್ಥಿನಿ ತುಂಬ ಖುಷಿಯಲ್ಲಿದ್ದಳು ಎಂದು ಆಕೆಯ ಸ್ನೇಹಿತನೊಬ್ಬ ಆಕೆಯ ಸೋದರನಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಆಕೆ ಶಾಲೆಯಲ್ಲಿ ಬಿಡುವಿನ ಸಮಯದಲ್ಲಿ ಮತ್ತು ಊಟದ ಸಂದರ್ಭದಲ್ಲಿ ಆನ್‌ಲೈನ್ ಆಟದಲ್ಲಿ ಮುಳುಗಿರುತ್ತಿದ್ದಳು ಎಂದೂ ಸ್ನೇಹಿತರು ತಿಳಿಸಿದ್ದಾರೆ. ಮೊಮೊ ಚಾಲೆಂಜ್ ಆಡುವವರಿಗೆ ಅಪರಿಚಿತ ವ್ಯಕ್ತಿಯೋರ್ವ ಸೂಚನೆಗಳನ್ನು ನೀಡುತ್ತಾನೆ,ಜೊತೆಗೆ ಅವರಲ್ಲಿ ತಲ್ಲಣಗಳನ್ನುಂಟು ಮಾಡುವ ಆಡಿಯೊ ಮತ್ತು ವೀಡಿಯೊ ಕ್ಲಿಪ್‌ಗಳನ್ನು ರವಾನಿಸುತ್ತಾನೆ. ಆತನ ಸೂಚನೆಗಳಂತೆ ಆಟವನ್ನು ಮುಂದುವರಿಸಬೇಕಾಗುತ್ತದೆ. ಈ ಆನ್ಲೈನ್ ಆಟಕ್ಕೆ ಇನ್ನು ಎಷ್ಟು ಜೀವಗಳು ಬಲಿಯಾಗಬೇಕೋ ಗೊತ್ತಿಲ್ಲ.
Comments