ತಾಯಿ ಆಸ್ತಿಯ ಮೇಲೆ ಕಣ್ಣು ಹಾಕಿದ ಮಕ್ಕಳಿಗೆ ಸಿವಿಲ್ ಕೋರ್ಟ್ ಕೊಟ್ಟ ಶಿಕ್ಷೆ ಎಂಥದ್ದು ಗೊತ್ತಾ..?

ಇತ್ತಿಚೆಗೆ ಆಸ್ತಿಗಾಗಿ ಸ್ವಂತ ಮಕ್ಕಳೇ ತಂದೆ ತಾಯಿ ಅನ್ನದೇನೆ ಕೊಲೆ ಮಾಡುತ್ತಿರುವುದನ್ನು ಕೇಳಿದ್ದೇವೆ ಹಾಗೇಯೇ ನೋಡಿದ್ದೇವೆ ಕೂಡ. ಆದರೆ ಇದೀಗ ಬೆಂಗಳೂರಿನ ಸಿವಿಲ್ ಕೋರ್ಟ್ ಅದಕ್ಕೆ ಅನ್ವಯಿಸುವಂತೆ ಮಹತ್ವದ ತೀರ್ಪನ್ನ ಕೊಟ್ಟಿದೆ.
ತಾಯಿಯ ಆಸ್ತಿ ಮೇಲೆ ಕಣ್ಣು ಹಾಕಿದ್ದ ಮೂವರು ಮಕ್ಕಳಿಗೆ 1 ಲಕ್ಷ ರೂ. ದಂಡವನ್ನು ವಿಧಿಸಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮಹತ್ವದ ತೀರ್ಪುನ್ನು ಕೊಟ್ಟಿದೆ. ಇದರ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ರೋಣ ವಾಸುದೇವ, ಮಗಳಿಗೆ ತಂದೆಯಿಂದಾಗಿ ಬಳುವಳಿಯಾಗಿ ಬರುವ ಆಸ್ತಿ ಹಕ್ಕು ಆಕೆಯದ್ದೇ ಆಗಿರುತ್ತದೆ. ಮಕ್ಕಳನ್ನು ಸೇರಿ ಬೇರೆ ಯಾರಿಗೂ ಆ ಆಸ್ತಿಯ ಮೇಲೆ ಹಕ್ಕು ಇರುವುದಿಲ್ಲವೆಂದು ಸ್ಪಷ್ಟವಾಗಿ ಅರ್ಜಿಯನ್ನು ವಜಾಗೊಳಿಸಿದೆ.
Comments