ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಇನ್ನಿಲ್ಲ

13 Aug 2018 4:42 PM | Crime
521 Report

ಮಾಜಿ ಲೋಕಸಭಾ ಸ್ಪೀಕರ್ ಆದಂತಹ ಸೋಮನಾಥ್ ಚಟರ್ಜಿ ಕೋಲ್ಕತಾದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

89 ವರ್ಷ ಪ್ರಾಯದ ಚಟರ್ಜಿಗೆ ಭಾನುವಾರ ಹೃದಯಾಘಾತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ಸಂಬಂಧಿತ ಸಮಸ್ಯೆಯಿಂದಲೂ ಕೂಡ ಅವರು ಬಳಲುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕಮ್ಯುನಿಸ್ಟ್ಟ್ ಪಕ್ಷದ ಹಿರಿಯ ನಾಯಕ ಚಟರ್ಜಿ 2004 ರಿಂದ 2009ರ ವರೆಗೂ ಯುಪಿಎ ಸರಕಾರದ ಅವಧಿಯಲ್ಲಿ ಲೋಕಸಭಾ ಸ್ಪೀಕರ್ ಕಾರ್ಯವನ್ನು ನಿರ್ವಹಿಸಿದ್ದರು.

Edited By

Manjula M

Reported By

Manjula M

Comments