ಕೊನೆಗೂ ಸಿಕ್ಕಿ ಬಿದ್ದ ಎಂ.ಎಂ. ಕಲಬುರ್ಗಿ ಹಂತಕ..!?

13 Aug 2018 10:44 AM | Crime
555 Report

ಸಾಹಿತಿ ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾಗಿ ವರ್ಷಗಳೇ ಕಳೆದರು ಕೂಡ ಹಂತಕರನ್ನು ಹುಡುಕಲು ಹರ ಸಾಹಸವನ್ನೆ ಪಡುತ್ತಿದ್ದಾರೆ.

ಕಳೆದ ಮೂರು ವರ್ಷದಿಂದ ರಾಜ್ಯದ ಖಾಕಿ ಪಡೆಗೆ ಸವಾಲಾಗಿದ್ದಂತಹ ಸಾಹಿತಿ ಎಂ.ಎಂ.ಕಲಬುರ್ಗಿ ಹತ್ಯೆ ಆರೋಪಿಗಳ ಸುಳಿವು ಪತ್ತೆ ಹಚ್ಚುವಲ್ಲಿ ಎಸ್ ಐಟಿ ಅಧಿಕಾರಿಗಳು ಇದೀಗ ಯಶಸ್ವಿಯಾಗಿದ್ದಾರೆ. ಎಂ.ಎಂ. ಕಲಬುರ್ಗಿ ಹತ್ಯೆ ಮಾಡಿದ್ದು ಕೂಡ ನಾವೇ ಎಂದು ಗೌರಿ ಹಂತಕನೊಬ್ಬ ತನಿಖಾ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.ಈ ವಿಚಾರಣೆ ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ.

Edited By

Manjula M

Reported By

Manjula M

Comments