ಗೌರಿ ಹತ್ಯೆ ಪ್ರಕರಣ : ಗನ್ ತರಬೇತಿಗೆ ತೋಟ ಬಿಟ್ಟುಕೊಟ್ಟಿದ್ದ 13 ನೇ ಆರೋಪಿ ಬಂಧನ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ವರ್ಷವೇ ಕಳೆಯುತ್ತಿದೆ. ಗೌರಿ ಲಂಕೇಶ್ ಅವರ ಹತ್ಯೆಗೆ ಬಂದೂಕು ತರಬೇತಿ ಪಡೆಯಲು ಆರೋಪಿಗಳಿಗೆ ಬಾಡಿಗೆ ಮನೆಯನ್ನು ಮಾಡಿಕೊಟ್ಟಿದ್ದಲ್ಲದೆ ತನ್ನದೇ ಆದ ತೋಟವನ್ನು ಬಿಟ್ಟುಕೊಟ್ಟಿದ್ದ ಬೆಳಗಾವಿ ನಿವಾಸಿ ಭರತ್ ಕುರ್ಣೆಯನ್ನು (37) ಬಂಧಿಸಿ ಇದೀಗ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ.
ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಇಂದು ಮತ್ತೆ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸುವಂತೆ ಎಸ್‌ಐಟಿ ಅಧಿಕಾರಿಗಳಿಗೆ ಸೂಚನೆಯನ್ನು ನ್ಯಾಯಾಲಯ ನೀಡಿದೆ. ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಭರತ್ ಕುರ್ಣೆ 13 ನೇ ಆರೋಪಿಯಾಗಿದ್ದಾರೆ. ಈತನ ಬಂಧನದಿಂದ ತನಿಖೆ ಮತ್ತೊಂದು ಘಟಕಕ್ಕೆ ವಿಸ್ತರಿಸಿದೆ ಎಂದು ಎಸ್ ಐಟಿ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
Comments